Connect with us

LATEST NEWS

ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಕೋಮುದ್ವೇಷ ಭಾಷಣನಾ…? – ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು ಮಾರ್ಚ್ 30: ನಾವು ಸತ್ಯ ಮಾತನಾಡುತ್ತೇವೆ ಇದನ್ನು ತಪ್ಪು ಎಂದು ಹೇಳುವವರು ದೈರ್ಯ್ಯದಿಂದ ಎದುರು ಬಂದು ಹೇಳಲಿ ನಾನು ಅದಕ್ಕೆ ಉತ್ತರ ಕೊಡ್ತೇನೆ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭೇಟಿಗೆ ಸಿಎಫ್ಐ ವಿರೋಧಿಸಿ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಮಾತನಾಡಿದ ಅವರು ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು, ವಿರೋಧಿಸುವವರು ವಿರೋಧ ಮಾಡ್ತಾರೆ ದೇಶಕ್ಕೋಸ್ಕರ ಕೆಲಸ ಮಾಡುವವರು ಕೆಲಸ ಮಾಡ್ತಾರೆ. ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಬದುಕಿ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದರು.


ನಾನು ಈ ಭಾಷಣದಲ್ಲಿ ಕೋಮು ದ್ವೇಷ ಹರಡಿಸಿದ್ನಾ? ಕೋಮು ದ್ವೇಷ ಅಂದ್ರೆ ಏನು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಕೋಮುನಾ? ಎಂದು ಪ್ರಶ್ನಿಸಿದ ಅವರು ಹಿಂದೂ ಎನ್ನುವುದು ಈ ದೇಶದ ಹೆಸರು ಭಾರತದಲ್ಲಿ ಇರುವವರು ಭಾರತೀಯರು, ಹಿಂದೂಸ್ಥಾನಾದಲ್ಲಿ ಇರುವವರು ಹಿಂದೂಗಳು ಇದರಲ್ಲಿ ಕೋಮುದ್ವೇಷದ ಪ್ರಶ್ನೆಯೇ ಇಲ್ಲ, ಈ ದೇಶದಲ್ಲಿ ಇರುವವರು ಎಲ್ಲಾ ಹಿಂದೂಗಳು, ಬ್ರಿಟಿಷರು ಬಂದು ಅದನ್ನು ವ್ಯತ್ಯಾಸ ಮಾಡಿದ್ರು ಅಷ್ಟೇ ಹಿಂದೂಗಳ‌ ಜೊತೆ ಜೊತೆಯಲ್ಲಿ ಎಲ್ಲರೂ ಬದುಕುವ ಪ್ರಯತ್ನ ಮಾಡಬೇಕು ಎಂದರು.

Advertisement
Click to comment

You must be logged in to post a comment Login

Leave a Reply