KARNATAKA
ಠಾಣಾಧಿಕಾರಿಗೆ 1 ವಾರ ಕಸ ಗುಡಿಸೋ ಶಿಕ್ಷೆ ವಿಧಿಸಿದ ಕಲಬುರಗಿ ಹೈಕೋರ್ಟ್…!

ಕಲಬುರಗಿ, ಡಿಸೆಂಬರ್ 24 : ಮಗ ಕಾಣೆಯಾಗಿದ್ದಾನೆಂದು ಮಹಿಳೆಯೊಬ್ಬರು ನೀಡಿದ ದೂರು ಸ್ವೀಕರಿಸಿ, ಎಫ್‍ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಕಲಬುರಗಿ ಸ್ಟೇಷನ್ ಬಜಾರ್ ಠಾಣಾಧಿಕಾರಿಗೆ ಕಲಬುರಗಿ ಹೈಕೋರ್ಟ್ ಕಸ ಗುಡಿಸುವ ಶಿಕ್ಷೆ ವಿಧಿಸಿದೆ. ಕಲಬುರಗಿ ತಾಲೂಕಿನ ಮಿಣಜಗಿ ತಾಂಡಾದ ಕೂಲಿ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ ಕಲಬುರಗಿ ಪೀಠ ಈ ಆದೇಶ ನೀಡಿದೆ.
ಮಹಿಳೆ ಮಗ ಸುರೇಶ್ ಕಾಣೆಯಾಗಿದ್ದಾನೆ ಎಂದು ದೂರು ನೀಡಿದರೂ ಠಾಣಾಧಿಕಾರಿ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಕರ್ತವ್ಯ ಲೋಪವಾಗುತ್ತದೆ. ಹಾಗಾಗಿ ಠಾಣಾಧಿಕಾರಿಗೆ ಕಲಬುರಗಿ ಹೈಕೋರ್ಟ್ ಕಸ ಗುಡಿಸುವ ಶಿಕ್ಷೆ ವಿಧಿಸಿದೆ. ಕಲಬುರಗಿ ತಾಲೂಕಿನ ಮಿಣಜಗಿ ತಾಂಡಾದ ಕೂಲಿ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ ಕಲಬುರಗಿ ಪೀಠ ಈ ಆದೇಶ ನೀಡಿದೆ.

ದೂರುದಾರೇ ತಾರಾಬಾಯಿ ಠಾಣೆಗೆ ಬಂದಿದ್ದರು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹೀಗಿದ್ದಾಗ ಆ ಅಧಿಕಾರಿ ಠಾಣಾ ಡೈರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಅದಾದ ಬಳಿಕ ಎಫ್‍ಐಆರ್ ದಾಖಲಿಸಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡಿಕೊಂಡಿಲ್ಲ ಇದು ಸಿಪಿಐ ಅವರ ನಿರ್ಲಕ್ಷ್ಯತೆಯಾಗಿದೆ.