LATEST NEWS
ಕದ್ರಿ ದೇವಳದ ಹುಂಡಿ ಹಣವನ್ನೇ ಎಗರಿಸಿದ ಮಹಿಳಾ ಟ್ರಸ್ಟಿ

ಮಂಗಳೂರು ಮಾರ್ಚ್ 23: ದೇವಸ್ಥಾನದ ಕಾಣಿಕೆ ಹುಂಡಿಯ ಹಣವನ್ನೆ ಸರಕಾರದಿಂದ ನೇಮಕವಾದ ಮಹಿಳಾ ಟ್ರಸ್ಟಿಯೊಬ್ಬರು ಎಗರಿಸಿರುವ ಘಚನೆ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೆಬ್ರವರಿ 24ರಂದು ಈ ಘಟನೆ ನಡೆದಿದ್ದು, ದೇವಸ್ಥಾನದ ಹುಂಡಿ ಹಣ ಎಣಿಕೆ ಸಂದರ್ಭ ಮಹಿಳಾ ಟ್ರಸ್ಟಿಯೊಬ್ಬರು 500ರ ನೋಟುಗಳನ್ನು ತಮ್ಮ ಬ್ಲೌಸ್ ಒಳಗೆ ತುರುಕಿಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ ದೇವಸ್ಥಾನದ ಟ್ರಸ್ಟಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸಿಸಿಟಿವಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.


Kadri temple
ಇನ್ನು ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆದು ವಾದ ವಿವಾದ ನಡೆದ ಬಳಿಕ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ಆದರೆ ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಆದರೆ ರಾಜಕೀಯ ವ್ಯಕ್ತಿಗಳ ಬೆಂಬಲದಿಂದಾಗಿ ಅವರ ಇನ್ನೂ ಟ್ರಸ್ಟಿಯಾಗಿಯೇ ಮುಂದುವರೆದಿದ್ದಾರೆ.