LATEST NEWS
12 ಕೋಟಿ ರೂಪಾಯಿ ವೆಚ್ಚದಲ್ಲಿ ಕದ್ರಿ ಪಾರ್ಕ್ ರಸ್ತೆ ನಿರ್ಮಾಣ
12 ಕೋಟಿ ರೂಪಾಯಿ ವೆಚ್ಚದಲ್ಲಿ ಕದ್ರಿ ಪಾರ್ಕ್ ರಸ್ತೆ ನಿರ್ಮಾಣ
ಮಂಗಳೂರು ಮೇ.07: ಕೇಂದ್ರ ಮತ್ತು ರಾಜ್ಯ ಸರಕಾರ ಸಹಭಾಗಿತ್ವದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತ ವಿನೂತನ ರೀತಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆ ಸರಿ ಸುಮಾರು 800 ಮೀಟರ್ ಉದ್ದದ ಇರಲಿದ್ದು ರಸ್ತೆಯಲ್ಲಿ ಇದ್ದಂತಹ ಡ್ರೈನೇಜ್ ಪೈಪ್ ಗಳು,ನೀರಿನ ಪೈಪ್ ಗಳು, ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಗಳು ಇವೆಲ್ಲವನ್ನು ರಸ್ತೆಯ ಒಂದೇ ಕಡೆಯಲ್ಲಿ ಅಳವಡಿಸಿ ಅಂಡರ್ ಗ್ರೌಂಡ್ ವ್ಯವಸ್ಥೆ ಕಲ್ಪಿಸಲಾಗುವುದು.
ಈ ರಸ್ತೆಯನ್ನು ಈಸ್ಟ್, ವೆಸ್ಟ್ ಮತ್ತು ಮಿಡಲ್ ಜ್ಹೋನ್ ಎಂದು ಮೂರು ವಿಭಾಗ ಮಾಡಲಾಗಿದೆ. ಈಸ್ಟ್ ಜ್ಹೋನ್ ಅಂದ್ರೆ ಕದ್ರಿ ಪೋಲಿಸ್ ಸ್ಟೇಶನ್ ನಿಂದ ಆಕಾಶವಾಣಿ ತನಕ ಹೋಗಿ ವಾಹನಗಳು ಯೂ ಟರ್ನ್ ಹಾಕಿ ಬರಬೇಕು. ಅದೇ ರೀತಿ ವೆಸ್ಟ್ ಜ್ಹೋನ್ ಪದವು ಹೈಸ್ಕೂಲ್ ಪ್ರಾರಂಭದಿಂದ ಗೋರಕ್ಷನಾಥ ಹಾಲ್ ತನಕ ಯೂ ಟರ್ನ್ ಹಾಕಿ ವಾಹನಗಳು ಸಾಗಬೇಕು. ಅದರ ಮಿಡಲ್ ಜ್ಹೋನ್ ನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ. ಅಲ್ಲಿ ಮಕ್ಕಳಿಗೆ ಆಟ ಆಡುವ ವ್ಯವಸ್ಥೆ ಸೇರಿದಂತೆ, ವಾಕಿಂಗ್ ಟ್ರ್ಯಾಕ್, ಕಾರಂಜಿಗಳು ಹೀಗೆ ಎಲ್ಲರಿಗೂ ಸಮಯವನ್ನು ಕಳೆಯಲು ವಿಶೇಷ ರೀತಿಯ ಅವಕಾಶ ಮಾಡಿ ಕೊಡಲಾಗುವುದು.
ಕೆಲವರ ಸಲಹೆಯಂತೆ ಹಲವು ಸೌಲಭ್ಯದೊಂದಿಗೆ ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣ ಮಾಡಬೇಕೆಂದು ಶಾಸಕ ಕಾಮತ್ ಅಧಿಕಾರಿಗಳಿಗೆ ಆದೇಶ ನೀಡಿದರು.ಈ ಪರಿಸರದಲ್ಲಿರುವ ಅಂಗಡಿ ಮಂಗಟ್ಟು ಇರುವವರಲ್ಲಿ ಈ ಬಗ್ಗೆ ಮಾತನಾಡಿ ಅವರಿಗೂ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇಲ್ಲಿರುವ ಯಾವುದೇ ಮರಗಳನ್ನು ಕಡಿಯದೇ ಬಹಳ ವಿನೂತನ ರೀತಿಯಲ್ಲಿ ಅಧಿಕಾರಿಗಳು ಈ ರಸ್ತೆ ನಿರ್ಮಿಸಲಿದ್ದಾರೆ.