Connect with us

LATEST NEWS

ಟ್ರಾಫಿಕ್ ವಾರ್ಡನ್ ಆಗಿ ರಸ್ತೆಗಿಳಿದ ಉಸ್ತುವಾರಿ ಸಚಿವ ಯು.ಟಿ ಖಾದರ್

ಟ್ರಾಫಿಕ್ ವಾರ್ಡನ್ ಆಗಿ ರಸ್ತೆಗಿಳಿದ ಉಸ್ತುವಾರಿ ಸಚಿವ ಯು.ಟಿ ಖಾದರ್

ಮಂಗಳೂರು ಜನವರಿ 12: ತೊಕ್ಕೊಟ್ಟು ಪಂಪ್ ವೆಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಟ್ರಾಫಿಕ್ ವಾರ್ಡನ್ ಆಗಿ ಸಚಿವ ಯು.ಟಿ ಖಾದರ್ ಕೆಲಸ ಮಾಡಿ ವಾಹನ ಸಂಚಾರ ಸುಗಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕಳೆದ 5 ವರ್ಷಗಳಿಂದ ಮಂಗಳೂರಿನ ತೊಕ್ಕೊಟ್ಟು ಪಂಪ್ ವೆಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಸಮರ್ಪಕ ಕಾಮಗಾರಿಯಿಂದಾಗಿ ಈ ಪ್ರದೇಶದಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್ ಆಗುವುದು ಸರ್ವೆ ಸಾಮಾನ್ಯವಾಗಿದೆ.

ಇಂದು ಕೂಡ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಸ್ವತಃ ರಸ್ತೆಗಿಳಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜನ ನಾಯಕನಿಂದ ಜನಸೇವಕನಾದ ಯು.ಟಿ.ಕೆಯ ಈ ಕಾರ್ಯ ಈಗ ಎಲ್ಲರ ಪ್ರಶಂಸೆಗೆ ವ್ಯಕ್ತವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *