ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ

ಮಂಗಳೂರು ಜನವರಿ 12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53 ನೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಶಾಸಕರು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರದ ಹಟ್ಟಿ ಬಳಿಯಿಂದ ಏನೆಲ್ ಮಾರ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ಸುಮಾರು 880 ಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟಿಕರಣ ನಡೆಯಲಿದೆ. ಅಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಮ್ಯಾನ್ ಹೋಲ್ ಗಳ ನಿರ್ಮಾಣ ಕೂಡ ನಡೆಯಲಿದೆ.

ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಕೆಲಸ ಕಾರ್ಯಗಳು ಶೀಘ್ರ ಆರಂಭಗೊಂಡು ಒಂದೆರಡು ತಿಂಗಳೊಳಗೆ ಮುಗಿಯಲಿವೆ. ಅದರೊಂದಿಗೆ ಬಜಾಲ್ ವಾರ್ಡಿನ ಸರ್ವತೋಮುಖ ಬೆಳವಣಿಗೆಗೆ ಅನುದಾನವನ್ನು ಅಲ್ಪಸಂಖ್ಯಾತ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ತಂದು ಅಭಿವೃದ್ಧಿ ನಡೆಸಲಾಗುವುದು ಎಂದು ಹೇಳಿದರು.