DAKSHINA KANNADA
ಕಡಬ: ಚಲಿಸುತ್ತಿದ್ದ ಸ್ಕೂಟಿ ಮೇಲೆ ಉರುಳಿದ ಬೃಹತ್ ಮರ, ಸ್ಥಳದಲ್ಲೇ ಪ್ರಾಣ ತೆತ್ತ ಸವಾರ..!
ಕಡಬ : ಚಲಿಸುತ್ತಿದ್ದ ಸ್ಕೂಟರ್‌ಗೆ ಮರ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಂಜದ ಪುಳಿಕುಕ್ಕು ಎಂಬಲ್ಲಿ ನಡೆದಿದೆ.
ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಸ್ಕೂಟಿ ಮೇಲೆ ಪುಳಿಕುಕ್ಕು ಸಮೀಪದ ತಿರುವಿನಲ್ಲಿ ಬೃಹತ್ ಗಾತ್ರದ ಮರ ಬಿದ್ದಿದೆ. ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಪ್ರಾಣ ಕಳಕೊಂಡಿದ್ದಾರೆ.
ಸುಬ್ಬಣ ಗೌಡ ಎಂಬವರ ಮಗ ಸೀತಾರಾಮ (58) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕೋಡಿಂಬಾಳ ಸಮೀಪದ ಪುಳಿಕುಕ್ಕುವಿನಲ್ಲಿ ಈ ದುರ್ಘಟನೆ ಸಂಭಸಿದ್ದು ಸೀತಾರಾಮ ಚಲಿಸುತಿದ್ದ ಸ್ಕ್ಯೂಟಿ ಗೆ ಬೃಹತ್ ಧೂಪದ ಮರ ಏಕಾಏಕಿ ಉರುಳಿದ್ದು, ಕ್ಷಣ ಮಾತ್ರದಲ್ಲಿ ಸೀತಾರಾಮರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿರು ಆಕ್ರೋಶ ವ್ಯಕ್ತಪಡಿಸಿದ್ದು ಈ ಮರದ ಬಗ್ಗೆ ಅನೇಕ ಸಲ ಗಮನಕ್ಕೆ ತಂದರೂ ಕಾರ್ಯ ಪ್ರವರ್ತರಾಗದ ಇಲಾಖೆ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಅಮಾಯಕರೊಬ್ಬರು ಪ್ರಾಣ ಕಳಕೊಳ್ಳಬೇಕಾತ್ತು ಎಂದಿದ್ದಾರೆ.
ಸೀತಾರಾಮರು ಎಡಮಂಗಲ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಆಗಿದ್ದು ಕಡಬದಿಂದ ಹರಕೆಗೆ ಕೋಳಿ ಕರೀದಿ ಮಾಡಿ ಮನೆಗೆ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿದ್ದಾರೆ.