Connect with us

    DAKSHINA KANNADA

    ಕಡಬ: ಆತೂರು ಶ್ರೀ ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ ಗಂಧದ ಕಡ್ಡಿ!

    ಕಡಬ, ಎಪ್ರಿಲ್ 08: ದೇವರಿಗಾಗಿ ಹಚ್ಚಿದ ಗಂಧದ ಕಡ್ಡಿಯಿಂದ ಹೊರಹೊಮ್ಮಿದ ಹೊಗೆ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಭಕ್ತರಲ್ಲಿ ಕೌತುಕ ಮೂಡಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲಿನ ವಾತಾವರಣವಿದ್ದು, ವಿಪರೀತ ಬಿಸಿಯಿಂದ ನೀರಿನ ಮೂಲಗಳೆಲ್ಲಾ ಬತ್ತಿ ಹೋಗಿದೆ. ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಲು ನೀರಿನ ಸಮಸ್ಯೆ ಎದುರಾಗಿದ್ದು, ನೀರಿನ ಸಮಸ್ಯೆ ನೀಗಿಸಿ ವರುಣ ದೇವರ‌ ಕೃಪೆಗೆ ಜನ ಮೊರೆ ಹೋಗುತ್ತಿದ್ದಾರೆ.

    ಇದೇ ರೀತಿ ವರುಣ ದೇವರ ಕೃಪೆಗಾಗಿ ಪ್ರಾರ್ಥಿಸಿ ಆತೂರು ಪರಿಸರದ ನಿವಾಸಿಗಳು ಎಪ್ರಿಲ್ 8 ರಂದು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ದೇವರಿಗೆ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದ್ದರು. ದೇವರ ಪೂಜೆಗಾಗಿ ಗರ್ಭಗುಡಿಯ ಬಾಗಿಲ ಬಳಿ ಒಂದು ಗಂಧದ ಕಡ್ಡಿಯನ್ನೂ ಹಚ್ಚಲಾಗಿತ್ತು. ಇದೇ ಗಂಧದ ಕಡ್ಡಿ ಇದೀಗ ಭಕ್ತರ ಪಾಲಿಗೆ ದೇವರ ಅಭಯ ಎನ್ನುವ ನಂಬಿಕೆಯನ್ನು ಭರಿಸುವಂತೆ ಮಾಡಿದೆ.

    ದೇವರ ವಿಗ್ರಹವಿರುವ ಗರ್ಭಗುಡಿಯ ಮೂರು ಪಾರ್ಶ್ವದಲ್ಲೂ ಗೋಡೆಯಿದ್ದು, ಗೋಡೆಯಲ್ಲಿ ಯಾವುದೇ ರೀತಿಯ ಗಾಳಿ ಹರಿದಾಡುವ ವ್ಯವಸ್ಥೆಯಿಲ್ಲ. ಕೇವಲ ಬಾಗಿಲಿನ ಮೂಲಕವೇ ಗಾಳಿ ಗರ್ಭಗುಡಿಯ ಒಳಗಡೆ ಪ್ರವೇಶಿಸಲು ಅವಕಾಶವಿದೆ. ಈ ಕಾರಣಕ್ಕಾಗಿ ದೇವರ ಬಾಗಿಲ ಬಳಿ ಹಚ್ಚಿದ ಗಂಧದ ಕಡ್ಡಿಯ ಹೊಗೆ ಗಾಳಿಯ ಮೂಲಕ ಗರ್ಭಗುಡಿಯ ಒಳಗೆ ಹೋಗಬೇಕಾಗಿತ್ತು.

    ಆದರೆ ಇಲ್ಲಿ ಹಚ್ಚಿದ ಕಡ್ಡಿಯ ಹೊಗೆ ಮಾತ್ರ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿತ್ತು. ಈ ರೀತಿ‌ ಹೊಗೆ ಹೊರಗಡೆ ಬರಲು ಕಾರಣವೇನು ಎನ್ನುವುದನ್ನು ಯೋಚಿಸಿದ ಭಕ್ತರಿಗೆ ಇದು ದೇವರ ಇಚ್ಛೆ‌ ಮತ್ತು ದೇವರ ಅಭಯ ಎನ್ನುವುದು ತಿಳಿದು ಬಂದಿತ್ತು. ಈ ಹಿಂದೆಯೂ ಇಲ್ಲಿ ಹಚ್ಚಿದ ಗಂಧದ ಕಡ್ಡಿಯಲ್ಲಿ ಹೊರಹೊಮ್ಮಿದ ಹೊಗೆಯಲ್ಲಿ ಓಂಕಾರಾಕ್ಷರವೂ ಬಂದಿರುವ ಬಗ್ಗೆ ಭಕ್ತರು ನೆನಪಿಸುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply