DAKSHINA KANNADA
ಕಡಬ – ಮೋರಿಗೆ ಬೈಕ್ ಡಿಕ್ಕಿ ವಿಧ್ಯಾರ್ಥಿ ಸಾ*ವು
ಕಡಬ ಜನವರಿ 17: ಸವಾರನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ವಿಧ್ಯಾರ್ಥಿ ಸಾವನಪ್ಪಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬದ ಪೇರಡ್ಕ ಎಂಬಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿಯನ್ನು ಕಲ್ಲುಗುಡ್ಡೆ ವಿಶ್ವನಾಥ ಎಂಬವರ ಏಕೈಕ ಪುತ್ರ ಆಶೀಶ್ (16) ಎಂದು ಗುರುತಿಸಲಾಗಿದೆ. ಪೇರಡ್ಕ ಸಾಂತೋಮ್ ಶಾಲೆಯ ವಿದ್ಯಾರ್ಥಿಯಾಗಿರುವ ಆತೀಶ್ ಬೈಕ್ ನಲ್ಲಿ ಶಾಲೆಗೆ ಬರುತ್ತಿರುವಾಗ ಘಟನೆ ನಡೆದಿದೆ. ಅತಿ ವೇಗ ಹಾಗೂ ಬೈಕ್ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದೆ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಧ್ಯಾರ್ಥಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದಾನೆ.
ಕಡಬದಲ್ಲಿ ವಿಧ್ಯಾರ್ಥಿಗಳು ಅತಿವೇಗ ಬೈಕ್ ಸವಾರಿಯನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಗಳ ವಾಹನ ತಪಾಸಣೆ ಮಾಡದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.