Connect with us

DAKSHINA KANNADA

ಕಾವ್ಯಾ ಸಾವಿನ ಸುತ್ತ , ಹರಡುತ್ತಿದೆ ಅನುಮಾನಗಳ ಹುತ್ತ :ಉತ್ತರಕ್ಕಾಗಿ ಆಡಳಿತ ಮಂಡಳಿಯತ್ತ ಎಲ್ಲರ ಚಿತ್ತ…….

ಮಂಗಳೂರು, ಜುಲೈ 27 : ಜುಲೈ 20 ರಂದು ಮೂಡಬಿದಿರೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಆಳ್ವಾಸ್ ನಲ್ಲಿ ಕಲಿಯುತ್ತಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಕಾವ್ಯಾ ಸಂಶಯಾಸ್ಪದ ಸಾವಿನ ತನಿಖೆಗಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟೀಸ್ ಫಾರ್ ಕಾವ್ಯಾ ಅಭಿಯಾನ ಆರಂಭಗೊಂಡಿದೆ. ಖಾಸಗಿ ಸುದ್ದಿ ವಾಹಿನಿಯಾಗಿರುವ ಪ್ರಜಾ ಟಿವಿ ಕಾವ್ಯಾ ಪ್ರಕರಣದಲ್ಲಿ ತನ್ನ ಪತ್ರಿಕಾಧರ್ಮವನ್ನು ಎತ್ತಿಹಿಡಿಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ . ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನವಾದ ಸುದ್ಧಿಯನ್ನೇ ಎಲ್ಲಾ ಚಾನೆಲ್ ಗಳು ಇಡೀ ದಿನ ಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಜಾ ಟಿವಿಯೊಂದೇ ಕಾವ್ಯಾಳ ಸಾವಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೂ ಪಾತ್ರವಾಗಿದೆ. ಅಂದ ಹಾಗೆ ಕಾವ್ಯಾ ಎಲ್ಲಾ ಹುಡುಗಿಯರಂತೆ ಮುದುಡಿ ಕುಳಿತುಕೊಳ್ಳುವ ಸ್ವಭಾವದವಳಲ್ಲ. ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದ ಕಾವ್ಯ ಸಾವಿನ ಹಿಂದೆ ಸಂಶಯದ ಹುತ್ತ ಹತ್ತಿಕೊಂಡಿದ್ದು, ವಿಧ್ಯಾರ್ಥಿನಿ ಸಾವಿನ ಹಿಂದೆ ಇರುವ ಕಾಣದ ಕೈಗಳ ಪತ್ತೆಯಾಗಬೇಕಿದೆ ಎನ್ನುವ ಬಲವಾದ ಆಗ್ರಹ ಈ ಅಭಿಯಾನದ ಮೂಲಕ ವ್ಯಕ್ತವಾಗುತ್ತಿದೆ. ಕಟೀಲು ದುರ್ಗಾಪರಮೇಶ್ವರಿ ಫ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾವ್ಯಾ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದಳು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಈಕೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಫ್ರೌಢಶಾಲೆಗೆ ಸೇರಿಸಲಾಗಿತ್ತು. ಕ್ರೀಡಾ ಚಟುವಟಿಕೆಯಲ್ಲಿ ಸದಾ ಮುಂದಿದ್ದ ಕಾವ್ಯಾ ತನ್ನ ಕ್ರೀಡಾ ಪ್ರತಿಭೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಹಾಸ್ಟೇಲ್ ನಲ್ಲಿ ತಂಗಿದ್ದಳು. ಪ್ರತಿ ವಾರವೂ ತನ್ನ ತಂದೆ, ತಾಯಿ ಜೊತೆ ದೂರವಾಣಿಯ ಮೂಲಕ ಮಾತನಾಡುತ್ತಿದ್ದ ಕಾವ್ಯಾ ಜುಲೈ 29 ಶನಿವಾರ ಶಾಲೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಕಟೀಲಿನ ತನ್ನ ಮನೆಗೆ ಹೋಗುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮನೆಗೆ ಬರಬೇಕಿದ್ದ ಕಾವ್ಯಾ ಮಸಣಕ್ಕೆ ಹೋಗಿದ್ದಳು. ಜುಲೈ 24 ರಂದು ಕಾವ್ಯಾ ತನ್ನ ಹಾಸ್ಟೇಲ್ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿ ಕಾವ್ಯಾ ಪೋಷಕರಿಗೆ ಮುಟ್ಟಿತ್ತು. ಆದರೆ ಪೋಷಕರು ಮಗಳನ್ನು ನೋಡಲು ಬರುವ ಮೊದಲೇ ಶಾಲಾ ಆಡಳಿತ ಮಂಡಳಿಯ ಕಾವ್ಯಾ ಶವವನ್ನು ಸಂಸ್ಥೆಗೆ ಸೇರಿದ ಶವಗಾರಕ್ಕೆ ಮುಟ್ಟಿಸಿಯೂ ಆಗಿತ್ತು. ಪೋಷಕರು ಬರುವ ಮೊದಲೇ ಕಾವ್ಯಾಳ ಮೃತದೇಹವನ್ನು ಆತುರದಲ್ಲಿ ಶವಾಗಾರಕ್ಕೆ ಕೊಂಡೊಯ್ಯಲು ಕಾರಣವೇನು, ಕಾವ್ಯಾ ಹಾಗೂ ಶಾಲೆಯ ಸಿಬ್ಬಂದಿಗಳ ನಡುವೆ ನಡೆದ ವ್ಯವಹಾರಗಳಾದರೂ ಏನು ಎನ್ನುವ ಸಂಶಯ ಇದೀಗ ಪೋಷಕರ ಜೊತೆಗೆ ಸಾರ್ವಜನಿಕರಲ್ಲೂ ಕಾಡತೊಡಗಿದೆ.  ಸಾವಿಗೀಡಾದ ಮೊದಲ ದಿನ ಮನೆಯವರೊಂದಿಗೆ ಅತ್ಯಂತ ಲವಲವಿಕೆಯಿಂದ ದೂರವಾಣಿಯಲ್ಲಿ ಮಾತನಾಡಿದ್ದ ಕಾವ್ಯಾ ಬೆಳಿಗ್ಗೆ ಎದ್ದಾಗ ಸಾವಿಗೀಡಾಗಿರುವುದರ ಹಿಂದೆ ಷಡ್ಯಂತರ ಅಡಗಿದೆ ಎನ್ನುವುದು ಕಾವ್ಯಾ ಪೋಷಕರ ಆರೋಪವಾಗಿದೆ. ಸಾವಿನ ಹಿಂದೆ ಶಾಲೆಯ ದೈಹಿಕ ಶಿಕ್ಷಕನ ಪಾತ್ರವೂ ಇದೆ ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದ್ದು, ಕಾವ್ಯಾ ಸಾವನ್ನಪ್ಪಿದ್ದ ಸುದ್ಧಿ ತಿಳಿದಿದ್ದರೂ, ಆಡಳಿತ ಮಂಡಳಿ ಕನಿಷ್ಟ ಮನೆಯವರಿಗೆ ಸಾಂತ್ವನವನ್ನು ಹೇಳುವ ಗೋಜಿಗೇ ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಅಂದ ಹಾಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಥ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಪ್ರಕರಣಗಳು ನಡೆದು ವರದಿಯಾದ ಬಳಿಕ ಹಾಗೆಯೇ ಮುಚ್ಚಿಹೋಗಿವೆ. ಸದಾ ಲವಲವಿಕೆಯಿಂದ ಇರುವ ಹಾಗೂ ಪ್ರತಿಭಾನ್ವಿತ ಹುಡುಗಿ ಕಾವ್ಯಾ ಸಾವು ಇನ್ನೊಂದು ಸೌಜನ್ಯ ಪ್ರಕರಣವಾಗಿರುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಇಂಥಹ ಆರೋಪಗಳಿರುವ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಸ್ವಯಂಪ್ರೇರಿತವಾಗಿ ಕಾವ್ಯಾ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಎಲ್ಲಾ ತನಿಖೆಗಳಿಗೂ ಸಿದ್ಧಗೊಳ್ಳಬೇಕಿದೆ.

ಕಾವ್ಯಳ ಸಾವಿನ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆ ಪರ ಟಿವಿ ಚಾನೆಲ್ ಒಂದಕ್ಕೆ ಮಾತನಾಡಿದವರ ಆಡಿಯೋ ಕೇಳಿ..

Share Information
Continue Reading
Advertisement
Click to comment

Leave a Reply

Your email address will not be published. Required fields are marked *