LATEST NEWS
ಪೊಲೀಸ್ ಅವಕಾಶ ಕೊಟ್ಟರೆ ಜುಲೈ 31 ರಂದು ಶಿರೂರು ಶ್ರೀಗಳ ಆರಾಧನೆ – ಸೋದೆ ಮಠಾಧೀಶ
ಪೊಲೀಸ್ ಅವಕಾಶ ಕೊಟ್ಟರೆ ಜುಲೈ 31 ರಂದು ಶಿರೂರು ಶ್ರೀಗಳ ಆರಾಧನೆ – ಸೋದೆ ಮಠಾಧೀಶ
ಉಡುಪಿ ಜುಲೈ 27: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರಕ್ಕೆ ಯಾವುದೇ ನಿಗದಿತ ಸಮಯ ಇಲ್ಲ ಎಂದು ಶಿರೂರು ದ್ವಂದ್ವ ಮಠ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಶೀರೂರು ಶ್ರೀ ವೃಂದಾವನಸ್ಥರಾದ ಹಿನ್ನೆಲೆ ಉತ್ತರಾಧಿಕಾರಿ ಆಯ್ಕೆಯ ಉಸ್ತುವಾರಿ ಈಗ ಸೋದೆ ಮಠ ನಡೆಸಲಿದ್ದು, ಅದಕ್ಕಾಗಿ ಸೂಕ್ತ ವಟುಗಾಗಿ ಹುಡುಕಾಟ ಆರಂಭವಾಗಿದೆ.
ಈ ನಡುವೆ ಶಿಷ್ಯ ಸ್ವೀಕಾರಕ್ಕೆ ಯಾವುದೇ ನಿಗದಿತ ಸಮಯ ಇಲ್ಲ, ಈ ಹಿನ್ನಲೆಯಲ್ಲಿ 18 ವರ್ಷ ಮೇಲ್ಪಟ್ಟ ವಟುವಿಗೆ ಧೀಕ್ಷೆ ಕೊಡಲಾಗುವುದು, ಶೀರೂರು ಮಠಕ್ಕೆ ಬಾಲ ಸನ್ಯಾಸಿಯ ನೇಮಕ ಮಾಡಲಾಗುವುದಿಲ್ಲ ಎಂದು ತಿಳಿಸಿದರು, ಸೂಕ್ತ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದು, ವಟು ಸಿಕ್ಕ ಕೂಡಲೇ ಪಟ್ಟಾಭಿಷೇಕ ಮಾಡಲಾಗುವುದು ಎಂದು ತಿಳಿಸಿದರು. ಸಂಸ್ಕೃತ ಪಾಂಡಿತ್ಯ, ಶಿಕ್ಷಣ ಇದ್ದ ವಟುವನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸದ್ಯ ಶಿರೂರು ಶ್ರೀಗಳ ಸಾವಿನ ತನಿಖೆ ನಡೆಯುತ್ತಿದ್ದು, ಶಿರೂರ ಮಠ ಈಗ ಪೊಲೀಸ್ ಸುಪರ್ದಿಯಲ್ಲಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಅವಕಾಶ ಕೊಟ್ಟರೆ ಜುಲೈ 31 ಕ್ಕೆ ಶಿರೂರು ಶ್ರೀಗಳ ಆರಾಧನೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಶೀರೂರು ಮಠದ ಆಸ್ತಿ ವಿವರ ನನಗೆ ತಿಳಿದಿಲ್ಲ, ಮಠವನ್ನು ಪೋಲಿಸರು ಬಿಟ್ಟುಕೊಟ್ಟ ನಂತರ ಲೆಕ್ಕಾಚಾರ ಮಾಡಲಾಗುವುದು, ಇದಕ್ಕಾಗಿ 5 ಜನರ ಸಮಿತಿಯನ್ನು ಒಂದೆರಡು ದಿನದಲ್ಲಿ ರಚಿಸಲಾಗುವುದು ಎಂದು ಹೇಳಿದ ಅವರು ಶೀರೂರು ಮಠ ಅನಾಥವಲ್ಲ ನಮಗೆ ಏಳೂ ಮಠಾಧೀಶರ ಸಹಕಾರವಿದೆ ಎಂದರು.