LATEST NEWS
ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಗೆ 10 ದಿನಗಳ ನ್ಯಾಯಾಂಗ ಬಂಧನ

ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಗೆ 10 ದಿನಗಳ ನ್ಯಾಯಾಂಗ ಬಂಧನ
ಉಡುಪಿ ಜೂನ್ 7: ಉಡುಪಿ ನ್ಯಾಯಾಲಯದ ಮುಂದೆ ಇಂದು ಬಂಧನವಾಗಿದ್ದ ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ್ ರನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ 10 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಕುಂದಾಪುರದಲ್ಲಿ ನಡೆದ ಕಾಲುಸಂಕ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೊಲೀಸರು ಇಂದು ಉಡುಪಿಯಲ್ಲಿ ಬಂಧಿಸಿದ್ದರು, ನಂತರ ಕುಂದಾಪುರ ಕೋರ್ಟ್ ಗೆ ಹಾಜರುಪಡಿಸಿದರು. ಕುಂದಾಪುರ ನ್ಯಾಯಾಲಯ ಪದ್ಮನಾಭ್ ಗೆ ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಉಡುಪಿ ನ್ಯಾಯಾಲಯದ ಮುಂದೆ ಕುಂದಾಪುರ ಠಾಣಾ ಪೊಲೀಸರು ಬಂಧಿಸಿದ್ದರು. 2004ರಲ್ಲಿ ಕುಂದಾಪುರ ತಾಲೂಕಿನ ಮಡಮಕ್ಕಿಯಲ್ಲಿ ನಡೆದ ಕಾಲುಸಂಕ ಧ್ವಂಸ ಪ್ರಕರಣಕ್ಕೆ ಸಂಬಂಧ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನಿಲಗುಳಿ ಪದ್ಮನಾಭ್ ನ್ಯಾಯಾಲಯದ ಹೊರಗೆ ಬರುತ್ತಿದ್ದಂತೆ ಬಂಧನದ ವಾರೆಂಟ್ ನೀಡಿ ವಶಕ್ಕೆ ಪಡೆದರು.
ಕಳೆದ ಹಲವು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ನಿಲಗುಳಿ ಪದ್ಮನಾಭ 2016 ರಲ್ಲಿ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು.
ಕುಂದಾಪುರ ಪೊಲೀಸರ ಬಂಧನದ ಬಗ್ಗೆ ನಿಲುಗುಳಿ ಪದ್ಮನಾಭ ಜಡ್ಜ್ ಗೆ ಪತ್ರ ಬರೆದಿದ್ದು, ಯಾವುದೇ ಮುನ್ಸೂಚನೆ ಇಲ್ಲದೆ ವಾರಂಟ್ ಇರುವ ಬಗ್ಗೆ ಯಾವುದೇ ಮಾಹಿತಿ ನೀಡದೇ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಮಾವಾಸ್ಯೆಬೈಲು ಠಾಣೆಯಿಂದ ಪ್ರಕರಣದ ಬಗ್ಗೆ ಯಾವುದೇ ಸಮನ್ಸ್ ಬಂದಿಲ್ಲ, ಈ ಹಿನ್ನಲೆಯಲ್ಲಿ ಪೊಲೀಸ್ ಬಂಧನದಿಂದ ಬಿಡುಗಡೆಗೊಳಿಸಿ ಜಾಮೀನು ಪಡೆಯಲು ಅವಕಾಶ ಕಲ್ಪಿಸಬೇಕೆಂದು ಪತ್ರ ಬರೆದಿದ್ದಾರೆ.
ಆದರೆ ಕುಂದಾಪುರ ನ್ಯಾಯಾಲಯ ನಿಲಗುಳಿ ಪದ್ಮನಾಭ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.