National
ಅಂಧ ವೃದ್ಧನನ್ನ ಬಸ್ಸಿಗತ್ತಿಸಿದ ಮಹಿಳೆಗೆ ಮನೆ ನೀಡಿದ ಜಾಯ್ ಅಲುಕ್ಕಾಸ್
ಕೇರಳ : ಅಂಧ ವೃದ್ಧರೊಬ್ಬರ ಕೈಹಿಡಿದು ಬಸ್ ಹತ್ತಿಸಿದ ಮಹಿಳೆಗೆ ಇದೀಗ ಬಿಗ್ ಗಿಫ್ಟ್ ಸಿಕ್ಕಿದೆ. ಇದೇ ತಿಂಗಳ ಪ್ರಾರಂಭದಲ್ಲಿ ಸುಪ್ರಿತಾ ಎಂಬ ಮಹಿಳೆ ತಾನು ಕೆಲಸ ಮಾಡುತ್ತಿರುವ ಅಂಗಡಿಯ ಬಳಿಯಿರುವ ಬಸ್ ನಿಲ್ದಾಣದಲ್ಲಿ ಅಂಧ ವೃದ್ಧರೊಬ್ಬರು ಬಸ್ಸಿಗೆ ಕಾಯುತ್ತಿರುವುದನ್ನು ಗಮನಿಸಿದ್ದಾರೆ. ಅಂತೆಯೇ ಬಸ್ ನಿಲ್ದಾಣಕ್ಕೆ ಇನ್ನೇನು ಹೊರ ಬೇಕೆನ್ನುವಷ್ಟುರಲ್ಲಿ ಅಜ್ಜ ಕೂಡ ಅದೇ ಬಸ್ಸಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಅಂಧರಾದ ಕಾರಣ ಬಸ್ ಹತ್ತಲು ಸಾಧ್ಯವಾಗಲಿಲ್ಲ. ಈ ಸಂದರ್ಭ ಇವೆಲ್ಲವನ್ನು ಗಮನಿಸಿದ್ದ ಸುಪ್ರಿತಾ ಕೂಡಲೇ ಓಡೋಡಿ ಬಂದು, ಹೊರಡಲು ಅಣಿಯಾಗುತ್ತಿದ್ದ ಬಸ್ಸನ್ನು ಓಡಿ ನಿಲ್ಲಿಸಿದ್ದಾರೆ. ಅಲ್ಲದೆ ತಾತನ ಕೈ ಹಿಡಿದು ಬಸ್ ಹತ್ತಿಸಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜಾಲತಾಣಿಗರು ಕೂಡ ಮಹಿಳೆಯ ಮಾನವೀಯ ಕಾರ್ಯಕ್ಕೆ ಮಾರು ಹೋಗಿ ಶಹಬ್ಬಾಸ್ ಅಂದಿದ್ದರು. ಇದಿಗ ಇದೇ ಮಹಿಳೆಗೆ ಒಂದು ದೊಡ್ಡ ಗಿಫ್ಟ್ ಸಿಕ್ಕಿದೆ. ಅದೇನಂದರೆ ಸುಪ್ರಿಯಾಗೆ ಕನಸಿನ ಮನೆಯೊಂದು ದೊರಕಿದೆ. ಈ ಮನೆಯನ್ನು ಪ್ರತಿಷ್ಠಿತ ಆಭರಣ ಮಳಿಗೆಯಾದ ಜಾಯ್ ಅಲುಕ್ಕಾಸ್ ಅವರು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ ಮಹಿಳೆಯನ್ನು ಸಂಸ್ಥೆ ಗೌರವಿಸಿದೆ.
ನಾನು ಮಾಡಿರುವ ಕಾರ್ಯಕ್ಕೆ ಇಂತಹದ್ದೊಂದು ದೊಡ್ಡ ಉಡುಗೊರೆ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ನಾನು ಜಾಯ್ ಅಲುಕ್ಕಾಸ್ ಮುಖ್ಯ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿರುವ ನೂರಾರು ಸಿಬ್ಬಂದಿ ನನ್ನನ್ನು ಹುರಿದುಂಬಿಸಿದರು. ಈ ವೇಳೆ ನನ್ನ ಕಣ್ಣಂಚಲ್ಲಿ ನೀರು ಬಂತು.
ನಾನು ವೃದ್ಧನಿಗೆ ಮಾಡಿರುವ ಸಹಾಯ ಅಚಾನಕ್ ಆಗಿದೆ. ಆದರೆ ಆ ವಿಚಾರ ನನ್ನನ್ನು ಈ ಮಟ್ಟಕ್ಕೆ ಅಲ್ಲದೆ ಇಷ್ಟೊಂದು ಮಂದಿ ಮೆಚ್ಚಿ ಕೊಂಡಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ. ಸುಪ್ರಿಯಾ ಅವರು ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪತಿ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.