LATEST NEWS
ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ
ಮಂಗಳೂರು ಫೆಬ್ರವರಿ 9: ರಾಜ್ಯ ಕೌಶಲ್ಯಾಭಿವೃದ್ಧಿ ನಿರ್ದೇಶನಾಲಯ, ಜಿಲ್ಲಾಡಳಿತ, ಆಳ್ವಾಸ್ ನೇತೃತ್ವದಲ್ಲಿ ಮಂಗಳೂರಿನ ಕೊಣಾಜೆ ವಿ.ವಿ.ಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕೌಶಲ್ಯಾಭಿವೃದ್ಧಿ ನಿರ್ದೇಶನಾಲಯ, ಜಿಲ್ಲಾಡಳಿತ, ಆಳ್ವಾಸ್ ನೇತೃತ್ವದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗ ಮೇಳಕ್ಕಾಗಿ ರಾಜ್ಯ ಸರಕಾರ 50 ಲಕ್ಷ ರೂ.ಬಿಡುಗಡೆ ಮಾಡಿದೆ ಎಂದರು. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಈ ಉದ್ಯೋಗ ಮೇಳದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಉದ್ಯೋಗ ಮೇಳದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ನೀಡಿಲ್ಲ, ಅವರಿಗೆ ಇನ್ನೊಮ್ಮೆ ಬೇರೆ ಮೇಳ ಆಯೋಜಿಸಲಾಗುವುದು ಎಂದರು. ಐಟಿಐ, ಡಿಪ್ಲೋಮಾ, ಪಿಜಿ, ಯುಜಿ, ಪಿಯುಸಿ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ ಎಂದರು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವ ವಿಧ್ಯಾರ್ಥಿಗಳು Www.mangaloreudyogamela.com ನಲ್ಲಿ ನೋಂದಾಯಿಸಿಕೊಳ್ಳಬಹುದು.
ಉದ್ಯೋಗ ಮೇಳದ ಮೊದಲ ಹಂತವಾಗಿ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಲಿದ್ದು , ಇದು ನಾಳೆ ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಕೆಪಿಟಿ ಕಾಲೇಜಿನಲ್ಲಿ ನಡೆಯಲಿದೆ,ಈ ಓರಿಯೆಂಟೇಶನ್ ನಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಾಯಕವಾಗಲಿದೆ ಎಂದರು.
ಈ ಉದ್ಯೋಗ ಮೇಳಕ್ಕೆ 87 ಕಂಪೆನಿಗಳು ತಮ್ಮಲ್ಲಿ 6095 ಉದ್ಯೋಗಗಳು ಖಾಲಿಯಿರುವ ಬಗ್ಗೆ ಮಾಹಿತಿ ನೀಡಿವೆ. ಈಗಾಗಲೇ 5685 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.