LATEST NEWS
ಜೆಸಿಬಿ ಟಯರ್ ಗೆ ಗಾಳಿ ತುಂಬಿಸುವಾಗ ಸ್ಪೋಟ ಚಾಲಕ ಸಾವು

ಮಂಗಳೂರು, ಜನವರಿ 10: ಜೆಸಿಬಿ ಟಯರ್ ಗೆ ಗಾಳಿ ತುಂಬಿಸುತ್ತಿವ ಸಂದರ್ಭ ಟಯರ್ ಟ್ಯೂಬ್ ಸಿಡಿದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಪಾದುವಾ ಶಾಲೆ ಬಳಿ ನಿನ್ನೆ ಸಂಭವಿಸಿದೆ.
ಮೃತನನ್ನು ಜೆಸಿಬಿ ಚಾಲಕ ಅಂಕೋಲಾ ಮೂಲದ ಟಿಪ್ಪರ್ ಚಾಲಕ ಮಿಥುನ್ (28) ಎಂದು ಗುರುತಿಸಲಾಗಿದ್ದು ಅವರು ಮಧ್ಯಾಹ್ನ ವೇಳೆ ಟಯರ್ ಅಂಗಡಿ ಎದುರು ಟಿಪ್ಪರ್ ನಿಲ್ಲಿಸಿ ಟಿಪ್ಪರ್‌ನೊಳಗಿದ್ದ ಜೆಸಿಬಿಯ ಟಯರ್‌ಗೆ ಗಾಳಿ ತುಂಬಿಸುತ್ತಿದ್ದರು.

ಆಗ ಟ್ಯೂಬ್ ಸ್ಫೋಟಗೊಂಡು ಡಿಸ್ಕ್ ಹಾರಿ ಅದರಲ್ಲಿದ್ದ ಬೋಲ್ಟ್‌ಗಳು ಮಿಥುನ್ ಅವರ ಎದೆಗೆ ಬಡಿದು ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.