DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜವಾನ್ ನಿರ್ದೇಶಕ ಅಟ್ಲಿ ಭೇಟಿ
ಸುಬ್ರಹ್ಮಣ್ಯ ಫೆಬ್ರವರಿ 01: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗ ಖ್ಯಾತ ನಿರ್ದೇಶದ ಅಟ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಟ್ಲಿ ಕುಮಾರ್ ಆಗಮಿಸಿ ದೇವರ ದರ್ಶನ ಪಡೆದರು.
ಈ ವೇಳೆ, ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸುವ ಭಕ್ತರ ಅನ್ನದಾನಕ್ಕೆ ಅಟ್ಲಿ ಅವರು 10 ಲಕ್ಷ ರೂಪಾಯಿ ದೇಣಿಗೆಯನ್ನು ಚೆಕ್ ಮೂಲಕ ನೀಡಿದರು. ದೇವರ ದರ್ಶನದ ಬಳಿಕ ಪ್ರಸಾದ ಸ್ವೀಕರಿಸಿದರು. ಬ್ಯಾಂಕ್ ಚೆಕ್ ಅನ್ನು ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತ್ತುಗುಂಡಿ ಅವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಅರವಿಂದ ಅಯ್ಯಪ್ಪ ಸುತ್ತುಗುಂಡಿ ಅವರು ದೇವಸ್ಥಾನದ ವತಿಯಿಂದ ಅಟ್ಲಿ ಅವರಿಗೆ ಶಾಲು ಹೊಂದಿಸಿ, ಸ್ಮರಣೆಗೆ ನೀಡಿ ಗೌರವಿಸಿದರು. ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.