LATEST NEWS
ಜನತಾ ಕರ್ಪ್ಯೂಗೆ ದಕ್ಷಿಣಕನ್ನಡದಲ್ಲಿ ಭಾರಿ ಬೆಂಬಲ ಸಂಪೂರ್ಣ ಸ್ತಬ್ದವಾದ ದಕ್ಷಿಣಕನ್ನಡ ಜಿಲ್ಲೆ

ಜನತಾ ಕರ್ಪ್ಯೂಗೆ ದಕ್ಷಿಣಕನ್ನಡದಲ್ಲಿ ಭಾರಿ ಬೆಂಬಲ ಸಂಪೂರ್ಣ ಸ್ತಬ್ದವಾದ ದಕ್ಷಿಣಕನ್ನಡ ಜಿಲ್ಲೆ
ಮಂಗಳೂರು ಮಾರ್ಚ್ 22: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಇಡೀ ದಕ್ಷಿಣಕನ್ನಡ ಜಿಲ್ಲೆ ಸ್ತಬ್ದವಾಗಿದೆ.
ಜಿಲ್ಲೆಯ ಜನರು ಜಾತಿ ಮತ ಭೇದ ಮರೆತು ಇಂದು ಬೆಳಿಗ್ಗೆಯಿಂದಲೇ ಜನತಾ ಕರ್ಪ್ಯೂವನ್ನು ಬೆಂಬಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸದಾ ಜನರ ಓಡಾಟದಿಂದ ಗಮನ ಸೆಳೆಯುತ್ತಿದ್ದ ನಗರದ ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿತ್ತು.

ಜನತಾ ಕರ್ಪ್ಯೂಗೆ ಮಂಗಳೂರು ಮೀನುಗಾರಿಕಾ ಬಂದರು ಸಂಪೂರ್ಣ ಸ್ತಬ್ಧವಾಗಿದ್ದು, ಜನ ಸಂಚಾರವೇ ಇಲ್ಲದೇ ಖಾಲಿ ಹೊಡೆಯುತ್ತಿದೆ ಫಿಶ್ ಬಂದರ್. ನಿತ್ಯ ಜನಜಂಗುಳಿ ಜೊತೆಗೆ ಭಾರೀ ವಹಿವಾಟು ನಡೆಯುವ ಮೀನುಗಾರಿಕಾ ಬಂದರು, ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿದೆ.
ಜನತಾ ಕರ್ಪ್ಯೂಗೆ ಪುತ್ತೂರಿನಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಪುತ್ತೂರು ನಗರ ಸಂಪೂರ್ಣ ಬಂದ್ ಆಗಿದ್ದು, ಎಲ್ಲಾ ಅಂಗಡಿ-ಮುಂಗಟ್ಟುಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಪುತ್ತೂರು ಸರಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಬಸ್ ಇಲ್ಲದ ಕಾರಣ ಜನರೂ ಬಸ್ ನಿಲ್ದಾಣದತ್ತ ಸುಳಿದಿಲ್ಲ.
ಒಟ್ಟಾರೆಯಾಗಿ ಪುತ್ತೂರಿನಲ್ಲಿ ಜನತಾ ಕರ್ಫೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆಸ್ಪತ್ರೆ ಮೊದಲಾದ ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿರುವವರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ವ್ಯವಸ್ಥೆಗಳು ಬಂದಾಗಿದೆ.