Connect with us

LATEST NEWS

ಜನತಾ ಕರ್ಫ್ಯೂ ಸರ್ವರೂ ಕೈಜೋಡಿಸಲು ಶಾಸಕ ಕಾಮತ್ ಮನವಿ

ಜನತಾ ಕರ್ಫ್ಯೂ ಸರ್ವರೂ ಕೈಜೋಡಿಸಲು ಶಾಸಕ ಕಾಮತ್ ಮನವಿ

ಮಂಗಳೂರು ಮಾರ್ಚ್ 20: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೊರೆನೋ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಭಾನುವಾರ ಒಂದು ದಿನದ ಜನತಾ ಕರ್ಫ್ಯೂನಲ್ಲಿ ಕೈಜೋಡಿಸುವಂತೆ ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸಿದ ಕೊರೆನೋ ಈಗಷ್ಟೇ ಭಾರತದಲ್ಲಿ ಹರಡಿಕೊಳ್ಳುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆಗೊಟ್ಟಿರುವ ಜನತಾ ಕರ್ಫ್ಯೂ ಎನ್ನುವ ಆಂದೋಲನದಲ್ಲಿ ಮಂಗಳೂರಿನ ಪ್ರತಿಯೊಬ್ಬ ನಾಗರಿಕರೂ ಕೈ ಜೋಡಿಸುವಂತೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ.

ಇಂದು ನಗರ ಪ್ರದೇಶಗಳಲ್ಲಿ ಕೊರೆನೋ ವ್ಯಾಪಕವಾಗಿ ಹರಡುತ್ತಿದೆ. ಸಾರ್ವಜನಿಕರ ಹಿತ ದೃಷ್ಠಿಯಿಂದ ಭಾನುವಾರ ಒಂದು ದಿನ ಮನೆಯಲ್ಲೇ ಉಳಿದುಕೊಳ್ಳುವಂತೆ ಪ್ರಧಾನಿಯವರು ಕರೆ ನೀಡಿದ್ದಾರೆ. ವೈರಸ್ ವಿರುದ್ಧ ಸರಕಾರದ ಹೋರಾಟದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *