LATEST NEWS
84 ವಯಸ್ಸಿನ ನನ್ನನಾದರೂ ದೇವರು ಕರೆಸಿಕೊಂಡು, ಆ ಮಗುವನ್ನು ಉಳಿಸಿಕೊಳ್ಳಬಾರದಿತ್ತೆ – ಜನಾರ್ಧನ ಪೂಜಾರಿ

ಮಂಗಳೂರು: 84 ವಯಸ್ಸಿನ ನನ್ನನಾದರೂ ದೇವರು ಕರೆಸಿಕೊಂಡು ಪುನೀತ್ ಅವರನ್ನು ಉಳಿಸಿಕೊಳ್ಳಬಾರದಿತ್ತೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಗದ್ಗದಿತರಾದರು.
ಕುದ್ರೋಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಬಾವಚಿತ್ರಕ್ಕೆ ಪುಷ್ಪಾಚರಣೆ ಮಾಡಿ ನುಡಿನಮನ ಸಲ್ಲಿಸಿದ ಜನಾರ್ಧನಪೂಜಾರಿ ಅವರು ಪುನೀತ್ ರಾಜ್‌ಕುಮಾರ್ ದೇಶದ ಮುತ್ತು. ದೇವರು ಏಕೆ ಇಷ್ಟು ಬೇಗ ಅವರನ್ನು ಕರೆಸಿಕೊಂಡರು? ವಿಧಿ ಯಾಕೆ ಇಷ್ಟು ಕ್ರೂರತೆ ಮೆರೆಯಿತು? ನಾವು ಮತ್ತೆ ಆ ಮುತ್ತನ್ನು ಪಡೆಯಲು ಸಾಧ್ಯವಿಲ್ಲ. ಇಳಿ ವಯಸ್ಸಿನ ನನ್ನನಾದರೂ ದೇವರು ಕರೆಸಿಕೊಂಡು, ಆ ಮಗುವನ್ನು ಉಳಿಸಿಕೊಳ್ಳಬಾರದಿತ್ತೆ’ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅವರನ್ನು ಮತ್ತೆ ನಾವು ಕರೆತರಲು ಸಾಧ್ಯವಾಗದ ಲೋಕಕ್ಕೆ ಹೋಗಿದ್ದಾರೆ. 84 ವರ್ಷದ ನಾನಿದ್ದೆ. ನನ್ನನ್ನಾದರೂ ಕರೆದುಕೊಂಡು ಹೋಗಬಾರದಿತ್ತೇ? ಪರಮಾತ್ಮ ನೀನು ಹಾಗೆ ಮಾಡಬಾರದಿತ್ತು’ ಎಂದು ಭಾವುಕರಾಗಿ ಹೇಳಿದರು.