LATEST NEWS
ರಾಜ್ಯ ಸರಕಾರದಿಂದ ಅಪರಾಧಿಗಳಿಗೆ ರಕ್ಷಣೆ – ಶೋಭಾ ಕರಂದ್ಲಾಜೆ ಆರೋಪ

ರಾಜ್ಯ ಸರಕಾರದಿಂದ ಅಪರಾಧಿಗಳಿಗೆ ರಕ್ಷಣೆ – ಶೋಭಾ ಕರಂದ್ಲಾಜೆ ಆರೋಪ
ಮಂಗಳೂರು ಮಾರ್ಚ್ 6: ಮಂಗಳೂರಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರಕಾರದ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಗೃಹ ಸಚಿವರು ಚುನಾವಣೆ ಹತ್ತಿರ ಬಂದಾಗ ಕರಾವಳಿ ಭಾಗಗಳಲ್ಲಿ ಸುತ್ತ ತೊಡಗಿದ್ದಾರೆ, ಶರತ್ ಮಡಿವಾಳ, ಪರೇಶ್ ಮೇಸ್ತ ಸತ್ತಾಗಲೂ ಸಿಎಂ ಕಾರ್ಯಕ್ರಮದ ಇದೆ ಎಂಬ ಕಾರಣದಿಂದ ಪೊಲೀಸರು ಸಾವನ್ನು ಮುಚ್ಚಿಟ್ಟಿದ್ದರು. ಈ ಮೂಲಕ ಮುಖ್ಯಮಂತ್ರಿಗಳು ತಾವು ಹೋದ ಕಡೆಯಲೆಲ್ಲಾ ಅಪರಾಧಿಗಳ ಕೈ ಮೇಲಾಗುವ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಪರಾಧಿಗಳಿಗೆ ರಕ್ಷಣೆ ಕೊಡಲು ಸರಕಾರ, ಸಚಿವರು, ಕೆಲವು ಚೇಲಾ ಪೊಲೀಸರಿದ್ದಾರೆಂದು ಎಂಬ ಧೈರ್ಯ ಅಪರಾಧಿಗಳಿಗೆ ಬಂದಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟ ಕಾಂಗ್ರೆಸ್ – ಬಿಜೆಪಿ ಮತ್ತು ಬಿಜೆಪಿ ನಡುವೆ , ಆದರೆ ಆದರೆ, ಕೊಲೆಯಾದ ಅಮಾಯಕರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ದನಗಳ್ಳ ಕಬೀರ್ ಗೆ ಸತ್ತಾಗ ಹತ್ತು ಲಕ್ಷ ಪರಿಹಾರ ನೀಡಿದ್ದಿರಾ, ಆದರೆ, ಅಮಾಯಕರ ಸಾವಿಗೆ ಎಷ್ಟು ಪರಿಹಾರ ನೀಡುತ್ತೀರಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುರ್ಚಿಯಿಂದ ಇಳಿಸಿ ಮನೆಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.