Connect with us

  LATEST NEWS

  ಕರ್ನಾಟಕ ಪಾಪಿಗಳ ಲೋಕದ ಸ್ವರ್ಗ ಆಗಿದೆ – ಅನಂತ ಕುಮಾರ್ ಹೆಗ್ಡೆ

  ಕರ್ನಾಟಕ ಪಾಪಿಗಳ ಲೋಕದ ಸ್ವರ್ಗ ಆಗಿದೆ – ಅನಂತ ಕುಮಾರ್ ಹೆಗ್ಡೆ

  ಮಂಗಳೂರು ಮಾರ್ಚ್ 6: ಬಿಜೆಪಿಯ ಜನ ಸುರಕ್ಷಾ ಯಾತ್ರೆ ಸಮಾವೇಶ ಸಮಾರಂಭದಲ್ಲಿ ಅನಂತ ಕುಮಾರ್ ಹೆಗ್ಡೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

  ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯ ದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ . 9400 ಡಕಾಯಿತಿ , 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ದಾಖಲಾಗಿದೆ. ಕರ್ನಾಟಕ ಪಾಪಿಗಳ ಲೋಕದ ಸ್ವರ್ಗ ಆಗಿದೆ ಎಂದು ವಾಗ್ದಾಳಿ ನಡೆಸಿದರು.

  ಸಿದ್ದರಾಮಯ್ಯನದ್ದು ಪಾತಕ ಸರ್ಕಾರ, ಪಾಪಿ ಮುಖ್ಯಮಂತ್ರಿ . ಹುಟ್ಟಿದ ರಕ್ತದ ನೆನಪಿಲ್ಲ, ಈ ನತಗೇಡಿಗೆ ಎಂದು ಟೀಕಿಸಿದ ಅವರು ನಾವು ಬೆಂಗಳೂರು ಬರೋ ಮುಂಚೆ, ಕುರ್ಚಿ ಬಿಟ್ಟು ತೊಲಗಿ . ಇಲ್ಲಾ ಅಂದ್ರೆ ಕರಾವಳಿಯಲ್ಲಿ ಸುನಾಮಿ ಎದ್ದಿದೆ, ಅದು ಬೆಂಗಳೂರು ಮುಟ್ಟಲಿದೆ ಎಂದು ಹೇಳಿದರು .

  ಮುಖ್ಯ ಮಂತ್ರಿ ಸಿದ್ದರಾಮಯ್ಯ ತುಷ್ಠೀಕರಣ ನೀತಿ ಅನುಸರಿಸುತ್ತಿದ್ದಾರೆ . 20 ಪರ್ಸೆಂಟ್ ಇರುವ ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸ್ತೀರಲ್ಲಾ . ಹಾಗಾದ್ರೆ ಬಹುಸಂಖ್ಯಾತ ಹಿಂದುಗಳು ಬೇವರ್ಸಿಗಳಾ? ಹಿಂದುಗಳ ಓಟಿಗೆ ಬೆಲೆ ಇಲ್ಲವೇ ? ಎಂದು ಆಕ್ರೋಶ ವ್ಯಕ್ತ ಪಡಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply