Connect with us

LATEST NEWS

ಜಿಲ್ಲೆಯ ಪ್ರಸಕ್ತ ಸನ್ನಿವೇಶ ವರ್ಣಿಸುವ ” ಹೆಣ ಬೇಕಾಗಿದೆ ” ಕವನ

ಜಿಲ್ಲೆಯ ಪ್ರಸಕ್ತ ಸನ್ನಿವೇಶ ವರ್ಣಿಸುವ ” ಹೆಣ ಬೇಕಾಗಿದೆ ” ಕವನ

ಮಂಗಳೂರು ಜನವರಿ 10; ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅನಿವಾಸಿ ಭಾರತಿಯರೊಬ್ಬರು ಬರೆದ ಕವಿತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಸೌದಿ ಅರೆಬಿಯಾದಲ್ಲಿರುವ ಅನಿವಾಸಿ ಭಾರತೀಯ ಜಲೀಲ್‌ ಮುಕ್ರಿ ಅವರು ಬರೆದಿರುವ ‘ಹೆಣ ಬೇಕಾಗಿದೆ’ ಎಂಬ ಕವನ ಸಂಕಲನವನ್ನು ಬರೆದಿದ್ದಾರೆ. ಹಣಬೇಕಾಗಿದೆ ಕವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಸದ್ಯ ಜಲೀಲ್‌ ಮುಕ್ರಿ ಅವರು ತಮ್ಮ ಸ್ವಗ್ರಾಮವಾದ ಉಪ್ಪಿನಗಂಡಿಗೆ ರಜೆ ಪ್ರಯುಕ್ತ ಬಂದಿದ್ದಾರೆ. ಇತ್ತೀಚೆಗೆ ಕರಾವಳಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಕುರಿತು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. 10ನೇ ವಯಸ್ಸಿನಿಂದಲೇ ಅವರು ಕವನ ಬರೆಯುತ್ತಿದ್ದಾರೆ. ಅವರ ಕವನದ ಸಾಲುಗಳಲ್ಲಿರುವ ತೀಕ್ಷ್ಣ ಶಬ್ದಗಳು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

” ಹೆಣ ಬೇಕಾಗಿದೆ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಮಾನವ ಹೆಣ ಖಂಡಿತ ಬೇಡ
ಹಿಂದು, ಮುಸ್ಲಿಮ್‌, ಕ್ರಿಶ್ಚಿಯನ್‌ರ
ಹೆಣ ಬೇಕಾಗಿದೆ
ಅರಮನೆ
ಕಟ್ಟಿಕೊಂಡಿದ್ದೇನೆ
ಮಕ್ಕಳು ಮರಿ
ಮಕ್ಕಳಿಗಾಗುವಷ್ಟು ಕೂಡಿಟ್ಟಿದ್ದೇನೆ
ಮಾನವ ಸಹಜ ಆಸೆ ನನ್ನಲ್ಲಿ ಇನ್ನೂ ಇದೆ ಇನ್ನೂ ಕೂಡಿಡಬೇಕಾಗಿದೆ
ಸಹಕರಿಸಿ ಹೆಣವೊಂದು ಬೇಕಾಗಿದೆ
ಹಿಂದೂ ಮುಸ್ಲಿಮ್‌
ಅನ್ನು ಕೊಂದ
ಮುಸ್ಲಿಂ ಹಿಂದೂವನ್ನು ಕೊಂದ
ಹೆಣ ಬೇಕಾಗಿದೆ
ಸ್ವಧರ್ಮದವರೇ ಕೊಂದ, ಅತ್ಯಾಚಾರ ಮಾಡಿದ ಹೆಣ ಖಂಡಿತ ಬೇಡ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಬಡವರಿಗೆ ಉಣ್ಣಿಸಲಿಲ್ಲ
ದರಿದ್ರರಿಗೆ ಸೂರಿಲ್ಲ
ಲಂಚ ಭ್ರಷ್ಟಾಚಾರ ನಿಲ್ಲಿಸಲಾಗಲಿಲ್ಲ
ಸುಳ್ಳು ಭರವಸೆ ಪೂರೈಸಲಿಲ್ಲ
ಮತಗಿಟ್ಟಿಸಲು ಬೇರೆ ದಾರಿಯಿಲ್ಲ
ಹೆಣವೊಂದು ಬೇಕಾಗಿದೆ
ಪೂಜಾರಿ, ಬಾಳಿಗ, ಅಶ್ರಫ್‌
ದಾನಮ್ಮ, ಶರತ್‌, ದೀಪಕ್‌
ಬಶೀರ್‌ ಹೆಣದಲ್ಲಿ
ಒಂದಿಷ್ಟು ಮತ ಸಿಕ್ಕೀತು
ಆದರೂ ಗೆಲ್ಲಲು ಇನ್ನೊಂದಿಷ್ಟು
ಹೆಣಗಳು ಬೇಕಾಗಿದೆ
ಪಕ್ಷ ಪಕ್ಷಗಳ
ಪೈಪೋಟಿಯ ಮಾರುಕಟ್ಟೆಯಲ್ಲಿ
ಹೆಣಗಳು ಹರಾಜಾಗುತ್ತಿವೆ ಬಿಕರಿಯಾಗುತ್ತಿವೆ
ಕೊಂದವರು, ಸತ್ತವರು
ಸಾರಾಸಗಟು ಹರಾಜಾಗುತ್ತಿದ್ದಾರೆ
ಸಹಕರಿಸಿ ಹೆಣ ಬೇಕಾಗಿದೆ “

Share Information
Continue Reading
Advertisement
Click to comment

Leave a Reply

Your email address will not be published. Required fields are marked *