LATEST NEWS
ಜಗದೀಶ್ ಕಾರಂತ ಬಂಧನ – ಪುತ್ತೂರಿನಲ್ಲಿ ಹೈ ಅಲರ್ಟ್

ಜಗದೀಶ್ ಕಾರಂತ ಬಂಧನ – ಪುತ್ತೂರಿನಲ್ಲಿ ಹೈ ಅಲರ್ಟ್
ಮಂಗಳೂರು ಸೆಪ್ಟೆಂಬರ್ 29: ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ಬಂಧನ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪುತ್ತೂರು ಬಸ್ ನಿಲ್ದಾಣದ ಬಳಿ ಸೇರಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹಿಂದೂ ಸಂಘಟನೆ ಕಾರ್ಯಕರ್ತರು ಹಿಂಜಾವೇ ಮುಖಂಡ ಜಗದೀಶ್ ಕಾರಂತ ಅವರನ್ನು ಬಂಧಿಸಿರುವುದನ್ನು ಖಂಡಿಸಿದರು.

ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಗದೀಶ್ ಕಾರಂತ ಅವರನ್ನು ಈ ಕೂಡಲೇ ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು.
ಪುತ್ತೂರಿನಲ್ಲಿ ಹೈ ಅಲರ್ಟ್
ಕೆಲವೇ ಕ್ಷಣಗಳಲ್ಲಿ ಪುತ್ತೂರು ತಲುಪಲಿದ್ದು ಅವರನ್ನು ಪೊಲೀಸರು ಪುತ್ತೂರು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಜಗದೀಶ್ ಕಾರಂತ್ ಬಂಧನ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿ ಪೊಲೀಸ್ ತುಕಡಿಗಳನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ.
ಪುತ್ತೂರು ನಗರ ತುಂಬೆಲ್ಲಾ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಪುತ್ತೂರಿನಲ್ಲಿ ಐದು ಪೊಲೀಸ್ ತುಕುಡಿಗಳ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಭಧ್ರತೆಯ ನೇತೃತ್ವ ವಹಿಸಿದ್ದಾರೆ.