FILM
ಹಿರಿಯ ನಟ ಜೈಜಗದೀಶ್ ಮಗಳ ಹಾಟ್ ಅವತಾರ….!!

ಬೆಂಗಳೂರು ಜುಲೈ 30: ಕನ್ನಡದ ಖ್ಯಾತ ನಟ ಜೈ ಜಗದೀಶ್ ಅವರ ಪುತ್ರಿ ನಟಿ ವೈಭವಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಅವತಾರದಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ. ದುಬೈನಲ್ಲಿ ಬರ್ತಡೇ ಆಚರಿಸಿಕೊಂಡಿರುವ ಅವರು ಸಖತ್ ಹಾಟ್ ಆಗಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್‌ವುಡ್‌ನ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ವೈಭವಿ ಜಗದೀಶ್ ಹಿರಿ ಮಗಳು. ಸಿನಿಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ವೈಭವಿ, ಹಾಟ್ ಅವತಾರದ ಮೂಲಕವೇ ಸದಾ ಎಲ್ಲರ ಕಣ್ಣು ಕುಕ್ಕುತ್ತಿರುತ್ತಾರೆ.

ತುಂಡುಡುಗೆಯಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ವೈಭವಿ, ಯಾವುದೇ ಮುಜುಗರಕ್ಕೊಳಗಾಗದೇ ಬೋಲ್ಡ್ ಭಂಗಿಯ ಮಾದಕ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ಇದೇ ವೈಭವಿ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಆ ಖುಷಿಯ ಕ್ಷಣವನ್ನು ಆಪ್ತರ ಜತೆಗೆ ದುಬೈನಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಹಾಟ್ ದಿರಿಸು ಧರಿಸಿ ಹಲವು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.