LATEST NEWS
ಸಂವಿಧಾನ ಬದಲಾವಣೆ ಹೇಳಿಕೆ ಆರೆಸ್ಸೆಸ್ ನಿರ್ದೇಶನದ ಮೇರೆಗೆ ಬಿಜೆಪಿಯ ಆಂತರಿಕ ನಿರ್ಧಾರ – ಐವನ್ ಡಿಸೋಜಾ

ಮಂಗಳೂರು, ಮಾರ್ಚ್ 12: ದೇಶದ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೇಳಿಕೆ ಅದು ಆರ್ ಎಸ್ ಎಸ್ ನಿರ್ದೇಶನದ ಮೇರೆಗೆ ಬಿಜೆಪಿಯ ಆಂತರಿಕ ನಿರ್ಧಾರ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಂತ ಕುಮಾರ ಹೆಗಡೆಯವರದ್ದು ಅವರ ವೈಯಕ್ತಿಕ ಹೇಳಿಕೆ ಎಂದು ಹೇಳುತ್ತಾ ಕಾರ್ಯಕರ್ತರದಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಈ ರೀತಿಯಾಗಿ ಬಿಜೆಪಿ ನಾಯಕರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಅನಂತ ಕುಮಾರ್ ಹೆಗಡೆಯವರು ಒತ್ತಡದಲ್ಲಿದ್ದು, ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಬಿಜೆಪಿಯ ಇತರ ನಾಯಕರು ಹೇಳುವಂತೆ ಅದು ಸಂಸದ ಹೆಗಡೆ ಅವರ ವೈಯಕ್ತಿಕ ಹೇಳಿಕೆಯಾದರೆ ಅವರನ್ನು ತಕ್ಷಣದಿಂದ ಪಕ್ಷದಿಂದ ವಜಾ ಮಾಡಲಿ ಎಂದು ಐವನ್ ಡಿಸೋಜಾ ಆಗ್ರಹಿಸಿದರು.