LATEST NEWS
ಕಾಂಗ್ರೇಸ್ ಮುಖಂಡ ಐವನ್ ಡಿಸೋಜಾ ಕೊರೊನಾ ಪಾಸಿಟಿವ್

ಮಂಗಳೂರು ಅಗಸ್ಟ್ 1: ಕಾಂಗ್ರೆಸ್ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜ್ವರ ಹಾಗೂ ಕೆಮ್ಮಿನ ಲಕ್ಷಣ ಹಿನ್ನಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದರು. ಇಂದು ಅದರ ವರದಿ ಬಂದಿದ್ದು ಕೊರೊನಾ ಪಾಸಿಟಿವ್ ದೃಢವಾಗಿದೆ.
ಈ ನಡುವೆ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಐವನ್ ಡಿಸೋಜ ಜೊತೆಗಿದ್ದು, ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಐವನ್ ಪಾಲ್ಗೊಂಡಿದ್ದರು
