Connect with us

LATEST NEWS

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಸ್ವಾಭಿಮಾನಿ ಇವರು….!!

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಸ್ವಾಭಿಮಾನಿ ಇವರು….!!

ಉಡುಪಿ : ಕೈಕಟ್ಟಿ ಕುಳಿತರೆ ಯಾವುದೇ ಕೆಲಸ ಆಗದು ಅನ್ನುವ ಹಾಗೆ ಸ್ವಾಭಿಮಾನ ಇದ್ದರೆ ತಮ್ಮ ವೈಫಲ್ಯತೆಗಳನ್ನೆ ಎದುರಿಸಿ ಜಯಶಾಲಿಯಾಗಬಹುದು ಎನ್ನುವುದಕ್ಕೆ ಇವರು ಒಂದು ಒಳ್ಳೆ ಉದಾಹರಣೆ. ಬೆನ್ನು ಮೂಳೆ ಮುರಿದು ಸ್ವಾಧೀನ‌ಕಳೆದುಕೊಂಡು ಬದುಕೇ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಪುಟಿದೆದ್ದು ಸಾಧಿಸಿ ತೊರಿಸಿದ ಇವರ ಸಾಹಸದ ಬದುಕಿನ ಕಥೆ ಇದು.

ಇವರ ಹೆಸರು ಕಲ್ಮಾಡಿಯ ಜಯಣ್ಣ. ತೆಂಗಿನಕಾಯಿ ಕೀಳೋ ಜಯಣ್ಣ ಇವರ ನಾಮಧೇಯ. ತೆಂಗಿನ ಮರವೇರಿ ಕಾಯಿ ಕೀಳುವ ಉದ್ಯೋಗ ಇವರದಾಗಿತ್ತು. ಅದೊಂದು ದಿನ ಎತ್ತರದ ಮರದಿಂದ ಕಾಯಿಗಳೊಂದಿಗೆ ಜಯಣ್ಣನೂ ಉರುಳಿದ್ರು. ಬೆನ್ನು ಮೂಳೆ ಮುರಿಯಿತು. ಈ ಅಪಘಾತಕ್ಕೆ ಜಯಣ್ಣ ತನ್ನ ಎರಡು ಕಾಲಗಳ ಸ್ವಾಧೀನವನ್ನೆ ಕಳೆದುಕೊಂಡರು.

ಎಂಟು ಜನರಿರುವ ಮನೆಯ ಹಿರಿಯ ಮಗ ಜಯಣ್ಣ ಬರೋಬ್ಬರಿ ಎಂಟು ವರ್ಷ ಹಾಸಿಗೆಯಲ್ಲಿ ಮಲಗಿದಲ್ಲೇ ಕಾಲ ಕಳೆದ್ರು, ಆದರೆ ಕಾಲು ಮಾತ್ರ ಮೊದಲಿನ ಸ್ಥಿತಿಗೆ ಬರಲಿಲ್ಲ. ಬೆನ್ನು ನೋವು ಕಡಿಮೆಯಾಗಿಲ್ಲ. ಆದರೆ ಸ್ವಾವಲಂಬನೆ ಅವರನ್ನು ಎಚ್ಚರಿಸಿದೆ. ಅಸಹಾಯಕತೆಯ ನಡುವೆಯೂ ಜೀವನ ಪ್ರೀತಿ ಅವರನ್ನು ಪ್ರೇರೇಪಿಸಿದೆ. ಸ್ವಾಭಿಮಾನದ ಪ್ರೀತಿಸೋಲಾರ್ ವಿದ್ಯುತ್ ಚಾಲಿತ ಸಣ್ಣ ಬಂಡಿಯನ್ನು ಬಳಸಿ ಎಳ್ನೀರು ವ್ಯಾಪಾರದಲ್ಲಿ ಅವರನ್ನು ತೊಡಗಿಸಿಯೇ ಬಿಟ್ಟಿದೆ.‌

ಮಲ್ಪೆ ಕಡಲ ಕಿನಾರೆಗೆ ಹೋಗುವಾಗ ಕಲ್ಮಾಡಿ ಸೇತುವೆಯ ಬಳಿ, ಬೊಬ್ಬರ್ಯ ಗುಡ್ಡಕ್ಕೆ ಹೋಗುವ ದ್ವಾರದ ಮುಂದೆ ಚಿಕ್ಕ ಗಾಡಿಯಲ್ಲಿ ಇವರು ಬೊಂಡದ ಮುಂದೆ ಕುತ್ಕೋತ್ತಾರೆ. ಸಂಜೆ ನಾಲ್ಕರಿಂದ ಎಂಟು ಗಂಟೆಯವರೆಗೆ ಇವರ ಬೊಂಡ ವ್ಯಾಪಾರ. ಎಳ್ನೀರು ಕುಡಿಯೋಕೆ ಬಂದವರಿಗೆ ಬಂಡಿಯೊಳಗೆ ಕೂತಿದ್ದ ಅವರ ಹಸನ್ಮುಖ ಎಲ್ಲರನ್ನು ಸೆಳೆದು ಬಿಡುತ್ತೆ. ನೋಡುತ್ತಿದ್ದೆ. ಬಂದ ಗಿರಾಕಿಗಳಿಗೆ ಬೊಂಡ ಕೆತ್ತುವುದನ್ನು ನೋಡಿದ್ರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದವರೆಂದು ಗೊತ್ತೇ ಆಗಲ್ಲ. ಎಳ್ನೀರು ಕುಡಿಯೋದಕ್ಕೆಂದು ಇಳಿಯುವವರು ಅವರ ಕಾಲನ್ನು ಗಮನಿಸದ್ರೆ, ಕಥೆ ಕೇಳಿದ್ರೆ ಅವರ ಆತ್ಮವಿಶ್ವಸಾದ ಚಿಲುಮೆ ಎಂಥವರನ್ನು ನಾಚಿಸಿ ಬಿಡುತ್ತೆ.
ಹಾಸಿಗೆಯಲ್ಲೇ ಇದ್ದ ಎಂಟು ವರ್ಷದ ಸೋಲನ್ನು ಗೆದ್ದುಕೊಳ್ಳಬೇಕೆಂಬ ಹಠ ನನ್ನದು ಎನ್ನುತ್ತಾ ತಾನಿವತ್ತು ಸ್ವಾವಲಂಬನೆಯ ಬದುಕನ್ನು ಕಂಡುಕೊಳ್ಳುತ್ತಿರಲು ನೆರವಾದ ಸಂಸ್ಥೆ, ವ್ಯಕ್ತಿಗಳನ್ನು ನೆನೆಯುವಾಗ ಅವರ ಕಣ್ಣಂಚಿನಲ್ಲಿ

ಹಾಸಿಗೆ ಹಿಡಿದಿದ್ದ ಜಯಣ್ಣಂಗೆ ಸ್ನೇಹಿತರೊಬ್ಬರು ಕನ್ಯಾಡಿಯಲ್ಲಿರುವ ಸೇವಾಭಾರತಿಯ ಮಾಹಿತಿ ನೀಡಿದರಂತೆ. ಆ ಸಂಸ್ಥೆ ನಡೆಸುತ್ತಿದ್ದ ಶಿಬಿರಕ್ಕೆ ಇವರು ಸೇರಿದರು. ಒಟ್ಟು 40 ಮಂದಿಯಲ್ಲಿ ಐದು ಜನರನ್ನು ಆಯ್ಕೆ ಮಾಡಿ ಬೆಂಗಳೂರಿನ APD ಸಂಸ್ಥೆಯ ಶಿಬಿರಕ್ಕೆ ಕಳಿಸಿಕೊಡಲಾಯಿತಂತೆ. ಅಲ್ಲಿ ಚಿಕಿತ್ಸೆ ಹಾಗೂ ಆತ್ಮವಿಶ್ವಾಸ ತುಂಬಿ ಇವರು ಮಾಡಬಹುದಾದ ಉದ್ಯೋಗವನ್ನು ಮನಗಾಣಿಸಿ, ಅದಕ್ಕೆ ಬೇಕಾದ ವಾಹನವನ್ನೂ ಉಚಿತವಾಗಿ ತಯಾರಿಸಿಕೊಟ್ಟರಂತೆ.

ನಿಜಕ್ಕೂ ಇವರು ಪ್ರತಿಯೊಬ್ಬರಿಗೂ ಪ್ರೇರಣೆ. ಈ ರೀತಿಯ ನೋವಿನಿಂದ ಬಳಲುತ್ತಿರುವವರಿಗೆಲ್ಲ ಮಾದರಿ. ಮಲ್ಪೆಗೆ ಹೋದಾಗ ಕಲ್ಮಾಡಿ ಸೇತುವೆ ಸಮೀಪದ ಇವರ ಗಾಡಿಯಂಗಡಿಯಿಂದ ಒಂದು ಎಳ್ನೀರು ಕೊಂಡು ಕುಡಿದರೆ ಅದು ಜಯಣ್ಣನ ಸ್ವಾವಲಂಬನೆಯ ಬದುಕಿಗೆ ನಾವೆಲ್ಲ ಪ್ರೋತ್ಸಾಹ ನೀಡಿದಂತಾಗುತ್ತದೆ ಅಲ್ವ. ಮಲ್ಪೆಗೆ ಬಂದ್ರೆ ಜಯಣ್ಣನ ಹತ್ರ ಹೋಗಿ ಬೊಂಡ ಕುಡಿಯದೆ ವಾಪಾಸು ಬರಬೇಡಿ ಆಯ್ತ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *