LATEST NEWS
ಆದಾಯ ತೆರಿಗೆ ದಾಳಿ – 3 ಮೀನು ಸಂಸ್ಕರಣಾ ಘಟಕಗಳ 195 ಕೋಟಿ ಅಘೋಷಿತ ಆಸ್ತಿ ಪತ್ತೆ
ಆದಾಯ ತೆರಿಗೆ ದಾಳಿ – 3 ಮೀನು ಸಂಸ್ಕರಣಾ ಘಟಕಗಳ 195 ಕೋಟಿ ಅಘೋಷಿತ ಆಸ್ತಿ ಪತ್ತೆ
ಮಂಗಳೂರು ಫೆಬ್ರವರಿ 13: ಕೆಲ ದಿನಗಳ ಹಿಂದೆ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರತಿಷ್ಠಿತ ಮೂರು ಮೀನು ಸಂಸ್ಕರಣ ಘಟಕಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಸುಮಾರು 195 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.
ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಮಂಗಳೂರು ಹಾಗೂ ಉಡುಪಿಯ ಮೂರು ಮೀನು ಸಂಸ್ಕರಣಾ ಘಟಕಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾಯ ತೆರಿಗೆ ಅಧಿಕಾರಿಗಳ ಈ ದಾಳಿಯ ಸಂದರ್ಭದಲ್ಲಿ ಸುಮಾರು 195 ಕೋಟಿ ರೂಪಾಯಿ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ತೆರಿಗೆ ಬಗ್ಗೆ ಮಾಹಿತಿ ಇಲ್ಲದ ಸುಮಾರು 88 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ಫೆಬ್ರವರಿ 8 ರಂದು ಸುಮಾರು 150 ಕ್ಕೂ ಅಧಿಕ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿರುವ ಮೀನು ಸಂಸ್ಕರಣಾ ಘಟಕ, ಅಲ್ಲದೆ ಈ ಘಟಕಗಳ ಜೊತೆ ಸಂಪರ್ಕ ಹೊಂದಿರುವ ಸಂಸ್ಥೆಗಳ ಮೇಲೂ ದಾಳಿ ನಡೆಸಿದ್ದರು.
ಈ ಮೂರು ಮೀನು ಸಂಸ್ಕರಣಾ ಘಟಕಗಳ ಮಾಲಕರು ಆದಾಯ ತೆರಿಗೆ ವಂಚನೆ ಮಾಡಲು ಏಜೆಂಟ್ ಗಗಳು, ಮೀನು ಮಾರಾಟಗಾರರು , ಅವರ ಸಂಬಂಧಿಕರುಗಳ ಹೆಸರಿನಲಲಿ ಬೇನಾಮಿ ಆಸ್ತಿ ಹೊಂದಿದ್ದು, ಮೀನು ಮಾರಾಟಗಾರರ ಹೆಸರಿನಲ್ಲಿ ನಕಲಿ ರಸೀದಿಗಳನ್ನು ಸೃಷ್ಠಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.