LATEST NEWS
ಮಣಿಪಾಲ – ಕುಡಿದ ಮತ್ತಿನಲ್ಲಿ ಐಟಿ ಉದ್ಯೋಗಿಗಳ ಗಲಾಟೆ

ಮಣಿಪಾಲ ಸೆಪ್ಟೆಂಬರ್ 04: ಪಬ್ ನಲ್ಲಿ ಪಾರ್ಟಿ ಮಾಡಿ ನಶೆಯಲ್ಲಿ ಯದ್ವಾತದ್ವಾ ಕಾರು ಚಲಾಯಿಸಿ ಎರಡು ಕಾರುಗಳನ್ನು ಜಖಂಗೊಳಿಸಿದ ಘಟನೆ ಮಣಿಪಾಲದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಈ ಘಟನೆಯಲ್ಲಿ ಪಬ್ ನೌಕರ ವಿಕ್ರಾಂತ್ ಎಂಬಾತ ಗಾಯಗೊಂಡಿದ್ದಾರೆ. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಸುಹಾಸ್ ದಾಂಧಲೆ ನಡೆಸಿದ ಆರೋಪಿಯಾಗಿದ್ದಾನೆ. ಈತ ಸ್ನೇಹಿತರಾದ ಭರತ್, ನವೀನ್ ಕಲ್ಯಾಣ್, ನಿರ್ಮಲ, ಕವನ ಆವರೊಂದಿಗೆ ಉಡುಪಿಯಲ್ಲಿ ಸಂಬಂಧಿಕರ ಮದುವೆಗೆ ಬಂದಿದ್ದು, ಶನಿವಾರ ರಾತ್ರಿ ಬ್ಯಾರೆಲ್ಸ್ ಪಬ್ಗೆ ತೆರಳಿ ಕಂಠಮಟ್ಟ ಕುಡಿದು ದಾಂಧಲೆ ಎಬ್ಬಿಸಿದ್ದಾರೆ. ಈ ಘಟನೆಯಲ್ಲಿ ಎರಡು ಕಾರುಗಳಿಗೆ ಹಾನಿಯಾಗಿದೆ. ಮಣಿಪಾಲ ಠಾಣೆಯಲ್ಲಿ ಕಾರು ಚಲಾಯಿಸಿದ ಸುಹಾಸ್ ವಿರುದ್ಧ ಫಾರ್ಚೂನರ್ ಕಾರು ಚಾಲಕ ರೋಶನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಸ್ನೇಹಿತರ ಜೊತೆಗೆ ಪಬ್ ಗೆ ಬಂದು ಹೊರ ಹೋಗುವಾಗ ಈ ಘಟನೆ ನಡೆದಿದ್ದು, ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಸುಹಾಸ್ ಮತ್ತು ಸ್ನೇಹಿತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸುಹಾಸ್ ಮದ್ಯ ಸೇವಿಸಿರುವುದು ದೃಢಗೊಂಡಿದೆ. ಇತರೆ ನಿಷೇಧಿತ ಅಮಲು ಪದಾರ್ಥ ಸೇವಿಸಿರುವುದರ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು ವರದಿ ನಿರೀಕ್ಷಿಸಲಾಗುತ್ತಿದೆ. ಘಟನೆಗೆ ಸಂಭಂದಿಸಿ ಕಪ್ಪು ಬಣ್ಣದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
https://www.facebook.com/reel/615775720135232