Connect with us

LATEST NEWS

ಟಾಟಾ ಗ್ರೂಫ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವು…!!

ಮುಂಬಯಿ ಸೆಪ್ಟೆಂಬರ್ 04: ಟಾಟಾ ಗ್ರೂಫ್ ನ ಮಾಜಿ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ.


ಮುಂಬೈ ನ ಪಾಲ್ಘರ್‌ನ ಚರೋತಿಯಲ್ಲಿ ಭಾನುವಾರ ಮಧ್ಯಾಹ್ನ 3:30ರ ಸುಮಾರಿಗೆ ಸೂರ್ಯ ನದಿಯ ಸೇತುವೆಯ ಡಿವೈಡರ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಸೈರಸ್ ಪಲ್ಲೊಂಜಿ ಮಿಸ್ತ್ರಿ ಭಾರತೀಯ ಮೂಲದ ಐರಿಶ್ ಉದ್ಯಮಿ. ಅವರು 2012 ರಿಂದ 2016 ರವರೆಗೆ ಭಾರತೀಯ ವ್ಯಾಪಾರ ಸಮೂಹವಾದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು.ಅವರು ಗುಂಪಿನ ಆರನೇ ಅಧ್ಯಕ್ಷರಾಗಿದ್ದರು.ಅಕ್ಟೋಬರ್ 2016 ರಲ್ಲಿ, ಟಾಟಾ ಗ್ರೂಪ್ ಹಿಡುವಳಿ ಕಂಪನಿ ಟಾಟಾ ಸನ್ಸ್, ಮಿಸ್ತ್ರಿ ಅವರಿಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವ ಅವಕಾಶವನ್ನು ನೀಡಿದ ನಂತರ ಅಧ್ಯಕ್ಷ ಸ್ಥಾನದಿಂದ ಅವರು ಕೆಳಗಿಳಿದಿದ್ದರು.

Advertisement
Click to comment

You must be logged in to post a comment Login

Leave a Reply