LATEST NEWS
ಪ್ಯಾಲೆಸ್ಟೀನ್ ಕಡೆಯ ರಫಾ ಗಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಇಸ್ರೇಲ್
ಗಾಜಾ ಮೇ 07: ಹಮಾಸ್ ಉಗ್ರರ ವಿರುದ್ದ ಯುದ್ದ ಸಾರಿರುವ ಇಸ್ರೇಲ್ ಹಮಾಸ್ ಉಗ್ರರ ಸಂದಾನಕ್ಕೆ ಬಗ್ಗದೆ ಇದೀಗ ದಕ್ಷಿಣ ಗಾಜಾದಲ್ಲಿ ಈಜಿಪ್ಟ್‌ಗೆ ಹೊಂದಿಕೊಂಡಿರುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಇಸ್ರೇಲ್ ನಲ್ಲಿ ಮಾರಣಹೋಮ ನಡೆಸಿದ ಬಳಿಕ ಹಮಾಸ್ ನ ಪ್ಯಾಲೆಸ್ಟೀನ್ ಮೇಲೆ ಮುಗಿ ಬಿದ್ದಿರುವ ಇಸ್ರೇಲ್ ಗಾಜಪಟ್ಟಿಯನ್ನು ಸಂಪೂರ್ಣ ನಾಶ ಮಾಡಿದೆ. ಅಲ್ಲದೆ ಒತ್ತೆಯಾಳುಗಳ ಬಿಡುಗಡೆ ಸಂಬಂಧ ಕತಾರ್ ಮತ್ತು ಈಜಿಫ್ಟ್ ಮಧ್ಯಸ್ಥಿಕೆಯಲ್ಲಿ ಸಂಧಾನಕ್ಕೆ ಹಮಾಸ್ ಬಂಡುಕೋರರು ಒಪ್ಪಿಗೆ ಸೂಚಿಸಿದ್ದರು. ಈ ನಡುವೆ ಇಸ್ರೇಲ್ ಆಕ್ರಮಣ ಮುಂದುವರಿಸಿರುವುದು ಸಂಧಾನ ಮಾತುಕತೆಗೆ ಹಿನ್ನಡೆಯಾಗಿದೆ. ಇಸ್ರೇಲ್‌ನ ಟ್ಯಾಂಕರ್‌ಗಳು ನಿಂತಿರುವ ಹಿನ್ನೆಲೆಯಲ್ಲಿ ಈಜಿಫ್ಟ್ ಪ್ರವೇಶಿಸುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ಪ್ರವೇಶವನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಿಂದ ತೆರಳುತ್ತಿದ್ದ ಮಾನವೀಯ ನೆರವು ಸಹ ಸ್ಥಗಿತಗೊಂಡಿದೆ. ಈ ಮಾತುಕತೆ ಮೂಲಕ ಉಭಯ ದೇಶಗಳ ನಡುವಿನ ಸಂಘರ್ಷ ತಪ್ಪಿಸಿ, ಶಾಂತಿ ನೆಲೆಸುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ಸಿಎನ್‌ಎನ್ ಹೇಳಿದೆ. ಸಂಧಾನ ಮಾತುಕತೆ ಪ್ರಕ್ರಿಯೆ ಭಾಗವಾಗಿ ಗಾಜಾದಿಂದ ಇಸ್ರೇಲ್ ಸೇನೆಯ ಹಿಂತೆಗೆತ, ವಿಮಾನಗಳ ಸಂಚಾರ 10 ಗಂಟೆ ಸ್ಥಗಿತ, ನೂರಾರು ಪ್ಯಾಲೆಸ್ಟೀನ್ ಒತ್ತೆಯಾಳುಗಳ ಬಿಡುಗಡೆ ವಿಷಯಗಳು ಇದ್ದವು.