LATEST NEWS
ಆಹಾರ ನೀರು ಇಂಧನ ಯಾವುದು ಸಿಗದಂತೆ ಗಾಜಾ ಪಟ್ಟಿ ಗೆ ದಿಗ್ಬಂಧನ ವಿಧಿಸಿದ ಇಸ್ರೇಲ್

ಇಸ್ರೇಲ್ ಅಕ್ಟೋಬರ್ 09: ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಸಾವಿರಾರು ಜನರನ್ನು ಕೊಂದ ಗಾಜಾಪಟ್ಟಿಯ ಉಗ್ರರ ವಿರುದ್ದ ಇದೀಗ ಇಸ್ರೇಲ್ ಭೀಕರವಾದ ಯುದ್ದಕ್ಕೆ ನಿಂತಿದ್ದು, ಇಡೀ ಗಾಜಾಪಟ್ಟಿಗೆ ಆಹಾರ ನೀರು ಇಂಧನ ಸಿಗದಂತೆ ಸಂಪೂರ್ಣ ದಿಗ್ಬಂದನ ವಿಧಿಸಿದೆ.
ಗಾಜಾಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅತೀ ಭೀಕರ ದಾಳಿ ನಡೆಸಿ ಸಾವಿರಾರು ಜನರನ್ನು ಹತ್ಯೆ ಮಾಡಿದ್ದಾರೆ. ಇದೀಗ ಗಾಜಾಪಟ್ಟಿಯ ಚಿತ್ರಣವನ್ನೇ ಬದಲಿಸುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲ್, ಗಾಜಾ ಪಟ್ಟಿಯ ಮೇಲೆ ಯುದ್ದ ಸಾರಿದ್ದು, ಆಕ್ರಮಣವನ್ನು ಜಾರಿಯಲ್ಲಿಟ್ಟಿದೆ.

ಈ ನಡುವೆ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇಸ್ರೇಲ್ ಈಗಾಗಲೇ ಗಾಜಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ನೀರು ಮತ್ತು ಆಹಾರ ಮತ್ತು ಇಂಧನವನ್ನು ನಿರ್ಬಂಧಿಸಿಲಿದ್ದೇವೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಹೇಳಿದ್ದಾರೆ, ಇಸ್ರೇಲ್ ಗಾಜಾದ ವಾಯುಪ್ರದೇಶ ಮತ್ತು ಪ್ರಾದೇಶಿಕ ನೀರನ್ನು ಮತ್ತು ಮೂರು ಗಡಿ ದಾಟುವ ಬಿಂದುಗಳಲ್ಲಿ ಎರಡನ್ನು ನಿಯಂತ್ರಿಸುತ್ತದೆ; ಮೂರನೆಯದನ್ನು ಈಜಿಪ್ಟ್ ನಿಯಂತ್ರಿಸುತ್ತದೆ.