Connect with us

LATEST NEWS

ಯೆಮೆನ್‌ನ ಹೌತಿ ನಿಯಂತ್ರಿತ ನಗರದ ಮೇಲೆ ಮುಗಿ ಬಿದ್ದ ಇಸ್ರೇಲ್‌, ವೈಮಾನಿಕ ದಾಳಿಗೆ ನಗರ ತತ್ತರ..!

ಇಸ್ರೇಲ್ : ಪಶ್ಚಿಮ ಯೆಮನ್ ಮೇಲೆ ಇಸ್ರೇಲಿ ಸೇನಾಪಡೆ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಪಶ್ಚಿಮ ಯೆಮೆನ್‌ ನ ಹೊಡೆಡಾದಲ್ಲಿರುವ  ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡಿದ್ದು ಶನಿವಾರ ಸಂಜೆ ಇಸ್ರೇಲ್ ಈ ದಾಳಿ ನಡೆಸಿದೆ.

ಇಸ್ರೇಲ್ ಮೇಲೆ ಗುರುವಾರ ನಡೆಸಿದ್ದ ಡ್ರೋನ್ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದೆ ಎನ್ನಲಾಗಿದೆ. ಹೌತಿಗಳೇ ಹೆಚ್ಚಾಗಿರುವ ಪಶ್ಚಿಮ ಕರಾವಳಿ ಯೆಮೆನ್ ನಗರದಲ್ಲಿ ಭಾರಿ ಸ್ಪೋಟಗಳು ಮತ್ತು ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಕಂಡುಬಂದಿವೆ ಎಂದು ಸ್ಥಳಿಯ ಮಾದ್ಯಮಗಳು ವರದಿ ಮಾಡಿವೆ.

ಹೌತಿ-ರನ್ ಔಟ್ಲೆಟ್ ಪ್ರಕಾರ, ಭೀಕರ ವಾಯು ದಾಳಿಯಲ್ಲಿ  ಹಲವಾರು ಜನರು ಸಾವನ್ನಪ್ಪಿದ್ದು ಭಾರಿ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ನಲ್ಲಿ ನಡೆದ ಡ್ರೋನ್  ದಾಳಿಯ ಹೊಣೆಯನ್ನು ಹೌತಿ ಹೊತ್ತುಕೊಂಡಿತ್ತು. ಈ ಡ್ರೋಣ್ ದಾಳಿಯಲ್ಲಿ ಒರ್ವ ಇಸ್ರೇಲಿ ಪ್ರಜೆ ಸಾವನ್ನಪ್ಪಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *