LATEST NEWS
ಜಗತ್ತಿನ ಶಕ್ತಿಶಾಲಿ ಬಾಂಬ್ ದಾಳಿಯೊಂದಿಗೆ ಇಸ್ರೇಲ್ ಇರಾನ್ ಯದ್ಧಕ್ಕೆ ಅಮೇರಿಕ ಎಂಟ್ರಿ

ವಾಷಿಂಗ್ಟನ್/ಟೆಹ್ರಾನ್: ಕಳೆದ 8 ದಿನಗಳಿಂದ ನಡೆಯುತ್ತಿದ್ದ ಇರಾನ್-ಇಸ್ರೇಲ್ ಯದ್ಧಕ್ಕೆ ಅಮೇರಿಕ ತನ್ನ ಶಕ್ತಿಶಾಲಿ ಬಾಂಬ್ ದಾಳಿಯೊಂದಿಗೆ ಎಂಟ್ರಿಕೊಟ್ಟಿದೆ.
ಎರಡು ವಾರಗಳ ಕಾಲ ಕಾದು ನೋಡುವ ಅಮೇರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಯ ನಡುವೆ ಇದೀಗ ಇರಾನ್ ಇಸ್ರೇಲ್ ವಾರ್ ಗೆ ) ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. 14,000 ಕೆಜಿ ತೂಕ ಹೊಂದಿರುವ ಹಾಗೂ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಗುರುತಿಸಿಕೊಂಡಿರುವ ಬಿ-12 ಬಾಂಬರ್ ಬಳಸಿ ಅಮೆರಿಕ ದಾಳಿ ನಡೆಸಿದೆ.

ವರದಿಗಳ ಪ್ರಕಾರ, ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್ ಬಸ್ಟರ್ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್ ಬಸ್ಟರ್ʼ ಇರಾನ್ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿವೆ.
ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ. ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಟ್ರಂಪ್ ಹೇಳಿದ್ದಾರೆ.