LATEST NEWS
ಗುಜರಾತ್ – ಮಂಗಳೂರಿಗೆ ಕಚ್ಚಾತೈಲ ತುಂಬಿಕೊಂಡು ಬರುತ್ತಿದ ಹಡಗಿನ ಮೇಲೆ ಡ್ರೋನ್ ದಾಳಿ
ನವದೆಹಲಿ ಡಿಸೆಂಬರ್ 23: ನವಮಂಗಳೂರು ಬಂದರಿಗೆ ಕಚ್ಚಾತೈಲ ಹೊತ್ತಕೊಂಡು ಬರುತ್ತಿದ್ದ ಹಡಗಿನ ಮೇಲೆ ಗುಜರಾತ್ ಕರಾವಳಿ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆಸಲಾಗಿದ್ದು, ಹಡಗಿಗೆ ಅಪಾರ ಹಾನಿಯುಂಟಾಗಿದೆ ಎಂದು ವರದಿಯಾಗಿದೆ. ಎಂವಿ ಚೆಮ್ ಪ್ಲುಟೋ ಎಂಬ ಹೆಸರಿನ ಹಡಗಿನ ಮೇಲೆ ದಾಳಿ ನಡೆದಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಗುಜರಾತಿನ ಫೋರ್ಬಂದರಿನಿಂದ ಸುಮಾರು 217 ನಾಟಿಕಲ್ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ.
ಡ್ರೋನ್ ದಾಳಿಯಿಂದ ಹೊತ್ತಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೌಕಾಪಡೆಯ ಯುದ್ಧನೌಕೆಗಳನ್ನು ತೊಂದರೆಗೊಳಗಾದ ಹಡಗಿನ ಕಡೆಗೆ ರವಾನಿಸಲಾಗಿದೆ. ಹಾನಿಗೊಳಗಾದ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದು ಖಚಿತವಾಗಿದೆ.
ಪ್ಲುಟೋ ಹಡುಗು ಸೌದಿ ಅರೇಬಿಯಾದಿಂದ ಕಚ್ಛಾ ತೈಲವನ್ನು ತುಂಬಿಕೊಂಡು ಕರ್ನಾಟಕದ ಮಂಗಳೂರಿನ ಕಡೆಗೆ ಹೊರಟಿತ್ತು. ದಾಳಿಯಲ್ಲಿ ಹಡಗಿನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತುಗೆ ನಿಯೋಜಿಸಿದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಇಸ್ರೇಲಿ ಹಡಗಿನ ಕಡೆಗೆ ಧಾವಿಸಿದ್ದು, ಸಿಬ್ಬಂದಿಯ ಸುರಕ್ಷತೆ ಬಗ್ಗೆ ಖಚಿತಪಡಿಸಿದೆ. ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಸದ್ಯ ನೌಕಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ