KARNATAKA
ಹೊಸವರ್ಷದ ಮೊದಲ ದಿನವೇ ಇಸ್ರೋ ಸಾಧನೆ – ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ
ಬೆಂಗಳೂರು ಜನವರಿ 01: ಕಳೆದ ವರ್ಷದ ಸಾಧನೆಯನ್ನು ಮತ್ತೆ ಈ ವರ್ಷ ಮುಂದುವರೆಸಲು ಇಸ್ರೋ ಮುಂದಾಗಿದ್ದು, ಅದರ ಮೊದಲ ಭಾಗವಾಗಿ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದ್ದು, ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಆ ಮೂಲಕ ಇಸ್ರೋ ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ ಸೃಷ್ಟಿಸಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್( X-Ray Polarimeter Satellite) ಉಪಗ್ರಹ ಎಕ್ಸ್‌ಪೋಸ್ಯಾಟ್ (XPoSat) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ ಪಿಎಸ್‌ಎಲ್‌ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್(Starts Up), ಶೈಕ್ಷಣಿಕ ಸಂಸ್ಥೆಗಳು(Educational Institutions) ಮತ್ತು ಇಸ್ರೋ ಕೇಂದ್ರಗಳು (ISRO Centers) ನಿರ್ಮಾಣ ಮಾಡಿವೆ.