LATEST NEWS
ಇಸ್ಲಾಂಗೆ ಯುರೋಪ್ ನಲ್ಲಿ ಜಾಗವಿಲ್ಲ – ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಇಟೆಲಿ ಡಿಸೆಂಬರ್ 18: ಇಸ್ಲಾಂ ಸಂಸ್ಕೃತಿಗೂ ಯುರೋಪಿಯನ್ ನಾಗರೀಕತೆಗೂ ಹೊಂದಾಣೆಕೆ ಸಮಸ್ಯೆ ಇದ್ದು, ಇಸ್ಲಾಂ ಗೆ ಯುರೋಪ್ ನಲ್ಲಿ ಜಾಗವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
ಬ್ರದರ್ಸ್ ಆಫ್ ಇಟಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಾಮಾನ್ಯವಾಗಿ ಇಸ್ಲಾಮಿಕ್ ಕಾನೂನು ಎಂದು ಕರೆಯಲ್ಪಡುವ ಷರಿಯಾ ಕಾನೂನು, ಇಸ್ಲಾಂ ಧರ್ಮದ ಮೂಲಭೂತ ಧಾರ್ಮಿಕ ಪಠ್ಯಗಳಾದ ಕುರಾನ್ ಮತ್ತು ಹದೀಸ್‌ನಲ್ಲಿರುವ ನಿಬಂಧನೆಗಳ ಪ್ರಕಾರ ಶಿಕ್ಷೆಗಳನ್ನು ವಿಧಿಸತ್ತದೆ ಎಂದು ಹೇಳಿದರು. ಈ ಮೂಲಕ ಯುರೋಪ್‌ನ ನಾಗರಿಕತೆಯ ಮೌಲ್ಯಗಳಿಗೂ ಇಸ್ಲಾಮ್‌ನ ಮೌಲ್ಯಗಳಿಗೂ ಬಹುದೂರವಿದೆ ಎಂಬುದನ್ನು ನಾವು ತಿಳಿಯಬೇಕು” ಎಂದು ಅವರು ಹೇಳಿದರು. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ ಹಣಕಾಸು ಪಡೆಯುತ್ತವೆ ಎಂಬುದು ನನಗೆ ಗೊತ್ತಿದೆ ಎಂದರು.
.