Connect with us

LATEST NEWS

ಪಣಂಬೂರು – ಮೀನುಗಾರಿಕಾ ದೋಣಿ ದುರಂತ – ನಾಲ್ವರ ರಕ್ಷಣೆ, ಓರ್ವ ನಾಪತ್ತೆ

ಮಂಗಳೂರು ಸೆಪ್ಟೆಂಬರ್ 11: ಭಾರೀ ಬಿರುಗಾಳಿಯಿಂದಾಗಿ ಮೀನುಗಾರಿಗಾ ಬೋಟ್ ಒಂದು ಸಮುದ್ರ ಪಾಲಾದ ಘಟನೆ ಪಣಂಬೂರು ಸಮುದ್ರ ತೀರದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ.


ನಾಪತ್ತೆಯಾದ ಮೀನುಗಾರನನ್ನು ಕಸಬಾ ಬೆಂಗರೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ಬೋಟ್‌ ಇದಾಗಿದ್ದು, ಸಮುದ್ರದಲ್ಲಿ ಪ್ರಕ್ಷುಬ್ದ ವಾತಾವರಣದ ಕಾರಣ ಬೋಟ್ ಮುಳುಗಡೆಯಾಗಿದೆ ಎಂದು ಹೇಳಲಾಗಿದೆ.

ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಈ ತಂಡದ ಬೆಂಗರೆಯ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಮೀನುಗಾರ ಶರೀಫ್​ಗಾಗಿ ಶೋಧ ಕಾರ್ಯ ಮುಂದುವರಿದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *