LATEST NEWS
ಶಬರಿಮಲೆ ಯಾತಾರ್ಥಿಗಳಿಗೆ ವಿಮಾನದಲ್ಲಿ ಇರುಮುಡಿ ಒಯ್ಯಲು ಅನುಮತಿ….!!
ಹೊಸದಿಲ್ಲಿ ನವೆಂಬರ್ 23: ಕೇರಳದ ಶಬರಿಮಲೆಗೆ ಭೇಟಿ ಕೊಡುವ ಯಾತ್ರಾರ್ಥಿಗಳಿಗೆ ಸೀಮಿತ ಅವಧಿಯ ಸಂದರ್ಭ ತಮ್ಮ ಬ್ಯಾಗೇಜ್ ಜೊತೆ ತೆಂಗಿನಕಾಯಿ ಕೊಂಡೊಯ್ಯಲು ಬ್ಯುರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಅನುಮತಿ ನೀಡಿದೆ.
ಶಬರಿಮಲೆ ಋುತು ಪ್ರಾರಂಭವಾಗಿರುವ ಹಿನ್ನಲೆ ಶಬರಿಮಲೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದು, ‘ಇರುಮುಡಿ’ ಹೊತ್ತು ಸಾಗುವ ಭಕ್ತರಿಗೆ ಈ ನಿಯಮದಿಂದ ಅನುಕೂಲವಾಗಲಿದೆ. ‘ಫೈರ್ ಸೇಫ್ಟಿ’ ಅಡಿಯಲ್ಲಿ ಕ್ಯಾಬಿನ್ ಬ್ಯಾಗ್ ಜತೆ ತೆಂಗಿನಕಾಯಿ ಒಯ್ಯಲು ಅವಕಾಶ ಇಲ್ಲ. ತಾತ್ಕಾಲಿಕವಾಗಿ ಈ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.
ಶಬರಿಮಲೆಯ ಅಯ್ಯಪ್ಪ ದೇವಾಲಯವು ಎರಡು ತಿಂಗಳ ಸುದೀರ್ಘ ತೀರ್ಥಯಾತ್ರೆಗಾಗಿ ನವೆಂಬರ್ 16ರಂದು ತೆರೆಯಲ್ಪಟ್ಟಿದೆ. ವಾರ್ಷಿಕ ಮಕರವಿಳಕ್ಕು ಯಾತ್ರೆಯು ನವೆಂಬರ್ 17ರಂದು ಪ್ರಾರಂಭವಾಗಿದ್ದು ಜನವರಿ 20ರಂದು ಕೊನೆಗೊಳ್ಳಲಿದೆ.