Connect with us

LATEST NEWS

ಇಸ್ರೇಲ್ ನ ಸೇನಾ ಆಸ್ಪತ್ರೆ ಮೇಲೆ ಇರಾನ್ ದಾಳಿ – ತಕ್ಕ ಬೆಲೆ ತರಬೇಕಾಗುತ್ತದೆ ಎಂದ ಇಸ್ರೇಲ್ ಪ್ರಧಾನಿ

ಜೆರುಸಲೆಂ ಜೂನ್ 19: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ದ ಮತ್ತೊಂದು ಹಂತಕ್ಕೆ ತಲುಪಿದ್ದು, ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ಇದೀಗ ಇಸ್ರೇಲ್ ನ ಪ್ರಮುಖ ಸ್ಥಳಗಳಲ್ಲಿ ಮೇಲೆ ಮಿಸೈಲ್ ದಾಳಿ ಪ್ರಾರಂಭಿಸಿದೆ. ದಕ್ಷಿಣ ಇಸ್ರೇಲ್‌ನ ಸರೋಕಾ ವೈದ್ಯಕೀಯ ಕೇಂದ್ರದ ಕಟ್ಟಡದ ಮೇಲೆ ಗುರುವಾರ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ ಕಟ್ಟಡದ ಒಳಗಿದ್ದ ಹಲವರು ಗಾಯಗೊಂಡಿದ್ದು, ಭಾರಿ ಹಾನಿಯುಂಟಾಗಿದೆ ಎಂದು ಇಸ್ರೇಲಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ.


ದಾಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ದಾಳಿಗೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದ್ದಾರೆ. ವರದಿಗಳ ಪ್ರಕಾರ ದಾಳಿಯಲ್ಲಿ ಕನಿಷ್ಠ 47 ಮಂದಿ ಗಾಯಗೊಂಡಿದ್ದಾರೆ. ಸರೋಕಾ ವೈದ್ಯಕೀಯ ಕೇಂದ್ರ ಇಸ್ರೇಲ್‌ನಲ್ಲಿನ ಅತಿದೊಡ್ಡ ಆಸ್ಪತ್ರೆಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *