Connect with us

    LATEST NEWS

    ಇಸ್ರೇಲ್ ಮೇಲೆ ಯುದ್ದ ಸಾರಿದ ಇರಾನ್ – ಮಿತ್ರ ರಾಷ್ಟ್ರ ಉಳಿಸಲು ಸಿದ್ದ ಎಂದ ಅಮೇರಿಕಾ

    ವಾಷಿಂಗ್ಟನ್‌ ಎಪ್ರಿಲ್ 14 : ಇರಾನ್ ಇಸ್ರೆಲ್ ಮೇಲೆ ಯುದ್ದ ಸಾರಿದ್ದು, ನೂರಾರು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿದೆ. ಆದರೆ ಅಮೇರಿಕಾ ಇಸ್ರೆಲ್ ಗೆ ಸಹಾಯಕ್ಕೆ ಬಂದಿದ್ದು, ಇರಾನ್ ನ ಹಲವು ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.


    ಇಸ್ರೇಲ್‌ ಮೇಲೆ ಪ್ರತೀಕಾರದ ದಾಳಿ ನಡೆಸುತ್ತಿರುವ ಇರಾನ್‌ ನಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಖಂಡಿಸಿದ್ದಾರೆ. ಮಿತ್ರ ರಾಷ್ಟ್ರ ಇಸ್ರೇಲ್‌ ಪರ ನಿಲ್ಲುವುದಾಗಿ ಹೇಳಿದ್ದ ಬೈಡನ್‌ ಇಸ್ರೇಲ್‌ಗೆ ಸೇನಾ ನೆರವನ್ನು ಒದಗಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಸ್ಥಿತಿಯ ಕುರಿತು ಮಾತನಾಡಿದ ಇಬ್ಬರು ಅಧಿಕಾರಿಗಳು, ಕೆಲವು ಕ್ಷಿಪಣಿಗಳನ್ನು ಅಮೆರಿಕ ನೌಕಾಪಡೆ ಹೊಡೆದುರುಳಿಸಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

    ಸಿರಿಯಾದ ಡಮಾಸ್ಕಸ್‌ನಲ್ಲಿ ಇರಾನ್ ಕಚೇರಿಯ ಮೇಲಿನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply