KARNATAKA
ಐಎಎಸ್ ಅಧಿಕಾರಿ ಅವರು ಡಿಲೀಟ್ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ – ರೋಹಿಣಿ ಸಿಂಧೂರಿಗೆ ರೂಪಾ ಐಪಿಎಸ್ ಪ್ರಶ್ನೆ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಜಡೆ ಜಗಳ ಇದೀಗ ಎಲ್ಲೇ ಮೀರಿ ಮುಂದಿನ ಹಂತಕ್ಕೆ ತಲುಪಿದ್ದು, ಇದೀಗ ಇಡೀ ದೇಶವೇ ಈ ಇಬ್ಬರ ಜಗಳದ ಬಗ್ಗೆ ಕುತೂಹಲದಿಂದ ಇರುವ ಹಾಗೆ ಆಗಿದೆ.
ರೋಹಿಣಿ ಸಿಂಧೂರಿ ರೂಪಾ ಅವರಿಗೆ ಗೆಟ್ ವೆಲ್ ಸೂನ್ ಅಂತ ಮಾಧ್ಯಮದವರ ಮುಂದೆ ಹೇಳಿದ ಬೆನ್ನಲ್ಲೇ ಇದೀಗ ಐಪಿಎಸ್ ಅಧಿಕಾರಿ ರೂಪಾ ಅವರು ಮತ್ತೊಂದು ಆರೋಪ ಮಾಡಿದ್ದು, ಇದೀಗ ಮತ್ತೊಂದು ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಫೇಸ್‌ಬುಕ್‌ನಲ್ಲಿ ಮೆಸೇಜ್ ಡಿಲೀಟ್ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಡಿ.ರೂಪಾ, ‘Get well soon ಅಂತಾ ನನಗೆ ಹೇಳಿದ್ದಾರಲ್ಲ ಪತ್ರಿಕಾಗೋಷ್ಟಿಯಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ ಡಿಲೀಟ್ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. ಮೇಲೆ ಕಾಣಿಸುತ್ತಿರುವ ಮೊಬೈಲ್ ನಂಬರ್ ಅವರದ್ದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ರೀತಿಯ ಚಿತ್ರಗಳನ್ನು ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ತನಿಖೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು’ ಎಂದು ರೂಪಾ ಬರೆದುಕೊಂಡಿದ್ದಾರೆ. ‘ಬೇಗ ಗುಣಮುಖರಾಗಿ ಎಂದು ಹೇಳುವುದರ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಅವರ ಅಭಿಪ್ರಾಯ ಎಷ್ಟು ತುಚ್ಛವಾಗಿದೆ ಎಂದು ತೋರಿಸುತ್ತದೆ’ ಎಂದು ರೂಪಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.