LATEST NEWS
ಮಂಗಳೂರು -20 ದಿನಗಳ ಕಾಲ ಲಾಡ್ಜ್ ನಲ್ಲಿ ಯುವತಿಯನ್ನ ದೈಹಿಕವಾಗಿ ಬಳಸಿಕೊಂಡ ಇನ್ಸ್ಟಾಗ್ರಾಂ ಫ್ರೆಂಡ್ ಅರೆಸ್ಟ್…!!

ಮಂಗಳೂರು ಜೂನ್ 29 : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿಕೊಂಡು ಆತನ ಜೊತೆ ತೆರಳಿದ್ದ ಯುವತಿಯನ್ನು ನಿರಂತರವಾಗಿ 20 ದಿನ ಲಾಡ್ಜ್ ನಲ್ಲಿ ದೈಹಿಕವಾಗಿ ಬಳಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದ್ದು, ಇದೀಗ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಡಬ ಮೂಲದ ಅನೀಶ್ ರೆಹಮಾನ್ ಬಂಧಿತ ವ್ಯಕ್ತಿ. ಅನೀಶ್ಗೆ ಇನ್ಸ್ಟಾಗ್ರಾಮ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ನಂತರ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿದ್ದನು. ಈ ಹಿನ್ನೆಲೆಯಲ್ಲಿ ಹೋಟೆಲ್ನಲ್ಲಿ ರೂಮ್ ಮಾಡಿದ್ದ ಆರೋಪಿ ಆಕೆಯ ಜೊತೆ ನಿರಂತರವಾಗಿ 20 ದಿನ ದೈಹಿಕ ಸಂಪರ್ಕ ಬೆಳೆಸಿದ್ದನು.

ಸಂತ್ರಸ್ತ ಯುವತಿಯು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಆರೋಪಿ ಕಡಬ ಮೂಲದ ಅನೀಶ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.
ಆರೋಪಿಗೆ ಹೋಟೆಲ್ ಗಳಲ್ಲಿ ಬಿಲ್ ಕೊಡದೆ ಪರಾರಿಯಾಗುವ ಚಟ ಹೊಂದಿದ್ದು ಈ ಹಿನ್ನಲೆ ಆತನನ್ನು ಹೋಟೆಲ್ ಸಿಬಂದಿ ಹಿಡಿದು ಹಾಕಿದ್ದರು. ಬಳಿಕ ಯುವತಿ ಬಳಿಯಿದ್ದ ಲ್ಯಾಪ್‌ಟಾಪ್ ಅನ್ನು ಹೊಟೇಲಿನಲ್ಲಿ ಅಡವಿಟ್ಟು ಹೊರಬಂದಿದ್ದ. ಲ್ಯಾಪ್‌ಟಾಪ್ ಕಾಣದಾಗಿದ್ದರಿಂದ ಯುವತಿ ಬಳಿ ಮನೆಯವರು ಪ್ರಶ್ನೆ ಮಾಡಿದ್ದರು. ಆ ಬಳಿಕ ಮನೆಯವರಿಗೆ ಇವರ ವಿಷಯ ತಿಳಿದು ಅನೀಶ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತನಿಗೆ ಮದುವೆಯಾಗಿರುವ ವಿಷಯ ತಿಳಿದುಬಂದಿತ್ತು.
ಆತನಿಗೆ ಮದುವೆಯಾಗಿರುವುದು ತಿಳಿದು ಯುವತಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ 506, 417 ಹಾಗೂ 376 ರ ಸೆಕ್ಷನ್ ಅಡಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅರೆಸ್ಟ್ ಮಾಡಿದ್ದಾರೆ. ಈ ಮೊದಲು ಗಾಂಜಾ ಕೇಸ್ನಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.