LATEST NEWS
ಇನ್ಸ್ಚಾಗ್ರಾಂ ನಲ್ಲಿ ಆರ್ಮಿ ಆಫಿಸರ್ ಎಂದು ನಂಬಿಸಿ ವ್ಯಕ್ತಿಗೆ 51 ಸಾವಿರ ವಂಚನೆ
ಮಂಗಳೂರು : ಜೂನ್ 24: ಆನ್ಲೈನ್ ನಲ್ಲಿ ಭಾರತೀಯ ಸೇನೆಯ ಹೆಸರನ್ನು ಹೇಳಿ ವಂಚಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಮಂಗಳೂರಿನಲ್ಲಿ ತಾನೊಬ್ಬ ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ 51,300 ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ರೀನಿವಾಸ್ ಎಂಬಾತ ತಮ್ಮ ಹೋಂಡಾ ಡಿಯೋ ವಾಹನವನ್ನು 23,000 ಸಾವಿರ ರೂ.ಗೆ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಇದನ್ನು ನೋಡಿ ಮಂಗಳೂರಿನ ವ್ಯಕ್ತಿ ಆತನ ಜೊತೆಗೆ ಮಾತನಾಡಿ 18 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದರು.
ಇದೇ ವೇಳೆ ಶ್ರೀನಿವಾಸ್ ತಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ಯೂನಿಫಾರ್ಮ್‌ನಲ್ಲಿದ್ದ ಫೋಟೋ ಮತ್ತು ಕಚೇರಿ ಎಂದು ಮತ್ತೊಂದು ಫೋಟೋವನ್ನು ಮಂಗಳೂರಿನ ವ್ಯಕ್ತಿಗೆ ಕಳುಹಿಸಿ ತಾನು ಸೈನಿಕನೆಂದು ನಂಬಿಸಿ ಇವರಿಂದ ಮುಂಗಡವಾಗಿ 3 ಸಾವಿರ ಪಡೆದು ಆರ್‌ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ. ನಂತರ ಬೇರೆ ಬೇರೆ ರೀತಿಯಲ್ಲಿ ₹51,300 ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ.