BANTWAL
ಅಮಾಯಕ ಮುಸ್ಲಿಂ ಯುವತಿಯರ ಮೇಲೆ ಅನೈತಿಕ ಪೋಲೀಸ್ ಗಿರಿ ನಡೆಸಿ ಮಾನಭಂಗಕ್ಕೆ ಯತ್ನ

ವಿಟ್ಲ, ಅಕ್ಟೋಬರ್, 11: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಅಮಾಯಕ ಮುಸ್ಲಿಂ ಯುವತಿಯರ ಮೇಲೆ ಅನೈತಿಕ ಪೋಲೀಸ್ ಗಿರಿ ನಡೆಸಿ ಮಾನಭಂಗಕ್ಕೆ ಯತ್ನ ವಿಟ್ಲ ಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸಾಲೆತ್ತೂರು ನಿವಾಸಿ ಇಸುಬು ಎಂಬವರ ಪುತ್ರಿ ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದರು. ವಿಟ್ಲಕ್ಕೆ ಹೋಗಿದ್ದ ಬಾಲಕಿ , ತನ್ನ ಸ್ಬೇಹಿತೆ ಜೊತೆಗೆ ಸಂಜೆ ವೇಳೆ ಮನೆ ಕಡೆ ಬಂದಿದ್ದಳು, ಆದರೆ ಮನೆ ಮಂದಿಯ ಕಿರಿಕಿರಿಗೆ ಹೆದರಿ ಮತ್ತೆ ಸ್ನೇಹಿತೆಯೊಂದಿಗೆ ವಿಟ್ಲ ಕಡೆ ಹೋಗಿದ್ದಾಳೆ.

ಬಾಲಕಿಯರ ಹುಡುಕಾಟದಲ್ಲಿ ತೊಡಗಿದ್ದ 50 ಕ್ಕೂ ಮಿಕ್ಕಿದ ಮುಸ್ಲಿಂ ಯುವಕರಿಂದ ತಂಡಕ್ಕೆ ಕುದ್ದುಪದವು ಎಂಬಲ್ಲಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಯುವತಿಯರ ಪತ್ರೆಯಾಗಿದ್ದಾರೆ. ಯುವತಿಯರನ್ನು ವಿಚಾರಣೆ ನಡೆಸದೆ ತಂಡದಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ. ಬುರ್ಖಾ ತೆಗೆದು ನೋಡಿದಾಗ ಯುವತಿಯರು ಬೇರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವತಿಯರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.