Connect with us

LATEST NEWS

ಮಂಗಳೂರಿನಲ್ಲಿದೆ ದೇಶದ ಅತೀ ದೊಡ್ಡ ಭೂಗತ ಎಲ್ ಪಿಜಿ ಸಂಗ್ರಹಾಗಾರ

ಮಂಗಳೂರು, ಜೂನ್ 20: ಮಂಗಳೂರಿನಲ್ಲಿ ದೇಶದ ಅತೀ ದೊಡ್ಡ ಭೂಗತ ಎಲ್ ಪಿಜಿ ಸಂಗ್ರಹಾಗಾರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಈಗಾಗಲೇ ಎಲ್ಲಾ ರೀತಿಯ ಪರೀಕ್ಷೆಗಳು ನಡೆದಿದೆ ಎಂದು ನಿರ್ಮಾಣದ ಹೊಣೆ ಹೊತ್ತಿರುವ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್ ತಿಳಿಸಿದೆ.


ಮಂಗಳೂರಿನ ಪೆರ್ಮುದೆ(1.5 ಲ.ಮೆಟ್ರಿಕ್ ಟನ್) ಹಾಗೂ ಪಾದೂರಿನಲ್ಲಿ (2.5 ಲ.ಮೆಟ್ರಿಕ್ ಟನ್) ಭೂಗತ ತೈಲ ಸಂಗ್ರಹಣಾಗಾರಗಳಿವೆ. ಇದು ಮೂರನೇ ಭೂಗತ ಸುರಂಗವಾಗಿದ್ದು, ಎಲ್‌ಪಿಜಿ ಸಂಗ್ರಹಿಸಲಾಗುವುದು. ಸದ್ಯ ವಿಶಾಖ ಪಟ್ಟಣಂನಲ್ಲಿ ನಿರ್ಮಿಸಿರುವ ಎಲ್‌ಪಿಜಿ ಸಂಗ್ರಹಣಾಗಾರ 60 ಸಾವಿರ ಟನ್‌ನದ್ದು. ಮಂಗಳೂರಿನದ್ದು 80 ಸಾವಿರ ಮೆ.ಟನ್‌ನದ್ದಾಗಿದ್ದು ದೇಶದಲ್ಲೇ ಅತಿ ದೊಡ್ಡದು. 2018 ರಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ ಮುಂದಾಗಿದ್ದು 2019ರಿಂದ ಕಾಮಗಾರಿ ಆರಂಭಿಸಿತ್ತು.


ಈ ಸಂಗ್ರಹಣಾಗಾರಕ್ಕೆ ಸಮುದ್ರ ದಲ್ಲಿರುವ ತೇಲುಜೆಟ್ಟಿ ಮೂಲಕ ಮುಂದಿನ ದಿನಗಳಲ್ಲಿ ಅನಿಲವನ್ನು ತುಂಬಲಾಗುತ್ತದೆ. ಅದಕ್ಕೆ ಬೇಕಾದ ಪೈಪ್‌ಲೈನ್ ನಿರ್ಮಾಣವೂ ಪೂರ್ಣಗೊಂಡಿದೆ. ನೆಲದಿಂದ 500 ಮೀಟರ್‌ನಷ್ಟು ಆಳದಲ್ಲಿ ದೊಡ್ಡ ಕಲ್ಲನ್ನು ಕೊರೆದು ಸುರಂಗವನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 800 ಕೋ.ರೂ. ವೆಚ್ಚ ಮಾಡಲಾಗಿದೆ. ಭಾರತದ ಅತಿದೊಡ್ಡ ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಂಗಳೂರಿನಲ್ಲಿ ಸಿದ್ಧಗೊಂಡಿದೆ. ಇದರೊಂದಿಗೆ, ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಸದ್ಯ, ವಿಶಾಖಪಟ್ಟಣದಲ್ಲಿರುವ 60 ಸಾವಿರ ಟನ್‌ ಸಂಗ್ರಹ ಸಾಮರ್ಥ್ಯದ ಎಲ್​ಪಿಜಿ ಸಂಗ್ರಹಾಗಾರ ಈವರೆಗೆ ದೇಶದ ಅತಿದೊಡ್ಡ ಸಂಗ್ರಹಾಗಾರವಾಗಿತ್ತು. ಇದೀಗ ಮಂಗಳೂರಿನಲ್ಲಿ ನಿರ್ಮಾಣವಾಗಿರುವ ಸಂಗ್ರಹಾಗಾರ 80,000 ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಅಭಿವೃದ್ಧಿಪಡಿಸಿದ ಸಂಗ್ರಹಾಗಾರ ಇದಾಗಿದೆ.


ದೇಶದಲ್ಲಿ ಸದ್ಯ 2 ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಾತ್ರ ಇದ್ದು, ಅದರಲ್ಲಿ ಮಂಗಳೂರಿನದ್ದೂ ಒಂದಾಗಿದೆ. ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಂಗಳೂರಿನ ಸಂಗ್ರಹಾಗಾರ ಬಹಳ ಮಹತ್ವದ್ದಾಗಿದೆ ಎಂದು ಕಂಪನಿ ತಿಳಿಸಿದೆ. ಈ ಸಂಗ್ರಹಾಗಾರವು ಆರು ಲಕ್ಷ ಬ್ಯಾರೆಲ್‌ಗಳು ಅಥವಾ 60 ಮಿಲಿಯನ್ ಲೀಟರ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಂಗ್ರಹಿಸಬಹುದು. ಅಷ್ಟೇ ಅಲ್ಲದೆ, 40,000 ಟನ್ ಪ್ರೊಪೇನ್ ಮತ್ತು 60,000 ಟನ್ ಬ್ಯುಟೇನ್ ಅನ್ನು ಸಂಗ್ರಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾದ ಎರಡು ಪ್ರತ್ಯೇಕ ಭೂಗತ ಕೊಠಡಿಗಳನ್ನು ಒಳಗೊಂಡಿದೆ.
ಮಂಗಳೂರು ಭೂಗತ ಎಲ್​ಪಿಜಿ ಸಂಗ್ರಹಾಗಾರವನ್ನು 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಎಲ್ಲಾ ಪ್ರಮುಖ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಎಂಇಐಎಲ್ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಇತ್ತೀಚೆಗೆ ಘೋಷಿಸಿತ್ತು.

ಅತ್ಯದ್ಭುತವಾಗಿ ವಿನ್ಯಾಸಗೊಳಿಸಲಾದ ಈ ಭೂಗತ ಸಂಗ್ರಹಾಗಾರವು 1,083 ಮೀಟರ್ ಸುರಂಗವನ್ನು ಹೊಂದಿದೆ. ಸಂಗ್ರಹಾಗಾರದ ಎರಡು ಮುಖ್ಯ ಘಟಕಗಳು ಎಸ್​1 ಮತ್ತು ಎಸ್​​2 ಕ್ರಮವಾಗಿ 220 ಮೀಟರ್ ಮತ್ತು 225 ಮೀಟರ್ ಆಳದಲ್ಲಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *