LATEST NEWS
ಅಮೇರಿಕಾದಲ್ಲಿ ಶಾರ್ಕ್ ದಾಳಿಗೆ ಮಂಗಳೂರಿನ ಮಹಿಳೆ ಧಾರುಣ ಸಾವು
ಅಮೇರಿಕಾದಲ್ಲಿ ಶಾರ್ಕ್ ದಾಳಿಗೆ ಮಂಗಳೂರಿನ ಮಹಿಳೆ ಧಾರುಣ ಸಾವು
ಮಂಗಳೂರು,ಡಿಸೆಂಬರ್ 03 : ಮಂಗಳೂರು ಮೂಲದ ಮಹಿಳೆಯೊಬ್ಬರು ಅಮೇರಿಕಾದಲ್ಲಿ ಶಾರ್ಕ್ ದಾಳಿಗೆ ಬಲಿಯಾಗಿದ್ದಾರೆ. ಅಮೆರಿಕಾದ ಕೋಸ್ಟಾ ರಿಕಾದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಮಂಗಳೂರು ಮೂಲದ ರೊಹಿನಾ ಭಂಡಾರಿ ಎಂದು ಗುರುತ್ತಿಸಲಾಗಿದೆ.ನವೆಂಬರ್ 30 ರ ಗುರುವಾರದಂದು ಈ ದುರ್ಘಟನೆ ಸಂಭವಿಸಿದೆ.
ಮಂಗಳೂರಿನ ಖ್ಯಾತ ವೈದ್ಯರಾದ ನಿತಿನ್ ಭಂಡಾರಿಯವರ ಸಹೋದರಿ ರೊಹಿನಾ ಭಂಡಾರಿ ಅವರು ಅಮೆರಿಕಾದ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರು ಕೋಸ್ಟಾರಿಕಾ ಕಡಲ ಕಿನಾರೆಯಿಂದ 530 ಕಿಮೀ ದೂರದ ಫೆಸಿಫಿಕ್ ಸಾಗರದಲ್ಲಿ ಸ್ಕೂಬಾ ಡೈವಿಂಗ್ ಮನೋರಂಜನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭಲ್ಲಿ ಟೈಗರ್ ಶಾರ್ಕ್ ರೊಹಿನಾ ಅವರ ಮೇಲೆ ದಾಳಿ ಮಾಡಿದೆ. ರೊಹಿನಾ ಅವರ ಎರಡೂ ಕಾಲುಗಳಿಗೆ ಟೈಗರ್ ಶಾರ್ಕ್ ತೀವೃವಾಗಿ ಕಚ್ಚಿ ಗಾಯಗೊಳಿಸಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ರೊಹಿನಾ ಅವರನ್ನು ನೀರಿನಿಂದ ಹೊರತೆಗೆದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಇದೇ ವೇಳೆ ರೊಹಿನಾ ಅವರ ರಕ್ಷಣೆಗೆ ಧಾವಿಸಿದ್ದ ಸ್ಕೂಬಾ ಡೈವಿಂಗ್ ಮಾಸ್ಟರ್ ಜಿಮಿನೆಜ್ ಅವರೂ ಶಾರ್ಕ್ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಟೈಗರ್ ಶಾರ್ಕ್ ಗಳು ಸುಮಾರು 15 ಅಡಿ ಉದ್ದವಿದ್ದು, ಸಾವಿರ ಕಿಲೋಗ್ರಾಂ ತೂಕ ಹೊಂದಿರುತ್ತವೆ. ಕೋಸ್ಟಾರಿಕಾದಲ್ಲಿ ಇಂತಹ ಅನೇಕ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇದು 5 ನೇ ಪ್ರಕರಣವಾಗಿದೆ.
49 ವರ್ಷದ ರೊಹಿನಾ ಭಂಡಾರಿಯವರು ಅಮೇರಿಕದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಫಿನಾನ್ಸ್ ಪದವಿಯನ್ನು ಪಡೆದಿದ್ದರು.
ಏಷಿಯನ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ ಮೆಂಟ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪದವಿ ಪಡಿದಿದ್ದರು. ಇವರು ಸೇಲ್ಸ್ ಆಂಟ್ ಮಾರ್ಕೆಟಿಂಗ್ ಪ್ರೊಫೆಶನಲ್ ಕೆಲಸ ಮಾಡುತ್ತಿದ್ದರು.