Connect with us

    LATEST NEWS

    ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ”ಆಳ್ವಾಸ್‌ ನುಡಿಸಿರಿ 2017′ ಕ್ಕೆ ಇಂದು ತೆರೆ

    ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ”ಆಳ್ವಾಸ್‌ ನುಡಿಸಿರಿ 2017′ ಕ್ಕೆ ಇಂದು ತೆರೆ

    ಮೂಡಬಿದಿರೆ, ಡಿಸೆಂಬರ್ 03 : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ “ಆಳ್ವಾಸ್‌ ನುಡಿಸಿರಿ 2017′ ಇಂದು ಸಂಜೆ ಸಮಾಪನಗೊಳ್ಳಲಿದೆ.

    ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ ನುಡಿಸಿರಿಯ ಪೀಠಿಕೆಯಾಗಿ ಅರಂಭಗೊಂಡ ಆಳ್ವಾಸ್‌ ವಿದ್ಯಾರ್ಥಿ ಸಿರಿ- ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನುಡಿಸಿರಿಗೆ ಉತ್ತಮ ಮುನ್ನುಡಿ ಬರೆಯಿತು.

    ಇದರೊಂದಿಗೆ ವಿಜ್ಞಾನ ಸಿರಿ ಭವಿಷ್ಯದ ವಿಜ್ಞಾನಿಗಳಿಗೆ ಒಂದಿಷ್ಟು ಸ್ಫೂರ್ತಿ, ಪ್ರೇರಣೆ ನೀಡಿತು.ಸಾವಿರಾರೂ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನ ಸಿರಿಯ ಪ್ರಾತ್ಯಕ್ಷಿಕೆ, ಪ್ರದರ್ಶನಗಳನ್ನು ವೀಕ್ಷಿಸಿದರು.

     

    ಕನ್ನಡ ನಾಡು ನುಡಿ ಸಂಸ್ಕೃತಿಯ ಹಬ್ಬ ನುಡಿಸಿರಿಯ ಪ್ರಥಮ ದಿನ ಸುಮಾರು ಒಂದು ಲಕ್ಷ ಜನ ಆಗಮಿಸಿದ್ದರು.

    ಪ್ರತಿದಿನ ಸಂಜೆಯಾಗುತ್ತಿದ್ದಂತೆ  ಬಹುತೇಕ ವಿದ್ಯಾಗಿರಿಯ ಎಲ್ಲಾ  ಸಭಾಂಗಣಗಳು ಜನರಿಂದ, ಕಲಾಪ್ರೇಮಿಗಳಿಂದ ತುಂಬಿ ತುಳುಕಿದ್ದವು.

    ಕೃಷಿ ಸಿರಿಗೆ ಈ ಬಾರಿ ಅತೀ ಹೆಚ್ಚು ಮಹತ್ವ ಬಂದಿತ್ತು. ಕೃಷಿ ಸಿರಿಗೆ ಅನೇಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಕೃಷಿಕರು, ಕೃಷಿ ಬಗ್ಗೆ ಒಲವು ಹೊಂದಿರುವವರು, ಯುವಕರು ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೃಷಿ ಸಿರಿಯ ವೀಕ್ಷಣೆ ಮಾಡಿದ್ದರು.

    ವಿವಿಧ ಮಾರಾಟ ಮಳಿಗೆಗಳಲ್ಲೂ ವ್ಯಾಪಾರ ಜೋರಾಗಿಯೇ ಇತ್ತು.

    ಇಂದು ಉದ್ಯೋಗ ಸಿರಿ
    ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗಾಗಿ ಇದೇ ಮೊದಲ ಬಾರಿ ಇಂದು ಆಳ್ವಾಸ್‌ ಉದ್ಯೋಗ ಸಿರಿ- ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.

    ಪ್ರಮುಖ ಸುಮಾರು ವಿವಿಧ 100 ಕಂಪೆನಿ ಹಾಗೂ ಸಂಸ್ಥೆಗಳು ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. .

     

    Share Information
    Advertisement
    Click to comment

    You must be logged in to post a comment Login

    Leave a Reply