DAKSHINA KANNADA
ಭಾರತದ ಎಚ್ಚರಿಕೆಗೆ ಮಣಿದ ಪಾಕ್, ಭಾರತೀಯ ಪೈಲಟ್ ಅಭಿನಂದನ್ ನಾಳೆ ಮರಳಿ ಭಾರತಕ್ಕೆ
ಭಾರತದ ಎಚ್ಚರಿಕೆಗೆ ಮಣಿದ ಪಾಕ್, ಭಾರತೀಯ ಪೈಲಟ್ ಅಭಿನಂದನ್ ನಾಳೆ ಮರಳಿ ಭಾರತಕ್ಕೆ
ಮಂಗಳೂರು, ಫೆಬ್ರವರಿ 28 : ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ಬಿಡುಗಡೆಗಾಗಿ ಭಾರತದ ಒತ್ತಡಕ್ಕೆ ಪಾಕಿಸ್ತಾನ ಸರಕಾರ ಮಣಿದಿದೆ.
ನಾಳೆಯೇ ಅಭಿನಂಧನ್ ಅವರನ್ನು ಭಾರತಕ್ಕೆ ಕಳುಹಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾಲ್ ಘೋಷಿಸಿದ್ದಾರೆ.
ಪಾಕಿಸ್ತಾನದ ಯುದ್ಧ ವಿಮಾನವಾದ ಎಫ್ 16 ವಿಮಾನವನ್ನು ಭಾರತದ ಗಡಿ ಪ್ರದೇಶದಿಂದ ಹೊರಗಟ್ಟುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡ ಭಾರತೀಯ ವಾಯುಸೇನೆಯ ಮಿಗ್ 21 ವಿಮಾನದ ಪೈಲಟ್ ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹೊರ ಜಿಗಿದಿದ್ದರು.
ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಪ್ರದೇಶದಲ್ಲಿ ಬಿದ್ದ ಹಿನ್ನಲೆಯಲ್ಲಿ ಪಾಕಿಸ್ತಾನದ ಸ್ಥಳೀಯ ಪ್ರಜೆಗಳು ಅಭಿನಂದನ್ ವಿರುದ್ಧ ಗಂಭೀರ ಹಲ್ಲೆಯನ್ನೂ ನಡೆಸಿದ್ದರು.
ಈ ನಡುವೆ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸುವಂತೆ ಮನವಿಯ ಜೊತೆಗೆ ಎಚ್ಚರಿಕೆಯನ್ನೂ ನೀಡಿತ್ತು.
ಭಾರತದ ಎಚ್ಚರಿಕೆಗೆ ಮಣಿದ ಪಾಕಿಸ್ತಾನ ಇದೀಗ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಲು ಒಪ್ಪಿಕೊಂಡಿದೆ.
ಅಭಿನಂದನ್ ಸುರಕ್ಷತೆಗಾಗಿ ದೇಶದಾದ್ಯಂತೆ ಜಾತಿ, ಧರ್ಮ ಮರೆತು ಭಾರತೀಯರು ಪ್ರಾರ್ಥನೆಯನ್ನೂ ನಡೆಸಿದ್ದು, ಇದೀಗ ಈ ಪ್ರಾರ್ಥನೆಗೆ ಫಲ ಸಿಕ್ಕಿದೆ ಎನ್ನಬಹುದಾಗಿದೆ.