Connect with us

    LATEST NEWS

    ಸುಳ್ಳು ಸುದ್ದಿ ನೀಡಿದ್ದಕ್ಕೆ ಹಿರಿಯ ಪತ್ರಕರ್ತ ರಾಜದೀಪ್ ಸರ್ ದೇಸಾಯಿಯನ್ನು ಎರಡು ವಾರ ಸಸ್ಪೆಂಡ್ ಮಾಡಿದ ಇಂಡಿಯಾ ಟುಡೇ

    ನವದೆಹಲಿ: ಜನವರಿ 26 ರಂದು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಸಂದರ್ಭ ರೈತನ ಸಾವಿನ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಿದ್ದಕ್ಕಾಗಿ ಹಿರಿಯ ಪತ್ರಕರ್ತ ಇಂಡಿಯಾ ಟುಡೆ ಸಲಹಾ ಸಂಪಾದಕ ರಾಜದೀಪ್ ಸರ್ ದೇಸಾಯಿ ಅವರನ್ನು ಎರಡು ವಾರಗಳ ಕಾಲ ಚಾನೆಲ್ ನಿಂದ ಹೊರಹಾಕಿದ್ದು, ಅಲ್ಲದೆ ಅವರ ಒಂದು ತಿಂಗಳ ಕಾಲ ಸಂಬಳನ್ನು ಕಟ್ ಮಾಡಿದೆ ಎಂದು ವರದಿಯಾಗಿದೆ.


    ಖ್ಯಾತ ಪತ್ರಕರ್ತರಾಗಿರುವ ರಾಜ್ ದೀಪ್ ಸರ್ ದೇಸಾಯಿ ಇಂಡಿಯಾ ಟುಡೆ ಚಾನೆಲ್ ನ ಸಲಹಾ ಸಂಪಾದಕರಾರಿ ಕೆಲಸ ಮಾಡುತ್ತಿದ್ದು, ಸದಾ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಸುದ್ದಿಗಳ ವಿಶ್ವಾಸಾರ್ಹತೆಯನ್ನು ತಿಳಿದುಕೊಳ್ಳದೆ ಬ್ರೆಕಿಂಗ್ ನ್ಯೂಸ್ ನೀಡಿ ಈಗಾಗಲೇ ಹಲವು ಬಾರಿ ಟೀಕೆಗೆ ಒಳಗಾಗಿದ್ದಾರೆ. ಈ ಬಾರಿ ಅಂತಹುದೇ ತಪ್ಪು ಮಾಡಿ ಚಾನೆಲ್ ನಿಂದಲೇ ಎರಡು ವಾರಗಳ ಕಾಲ ಸಸ್ಪೆಂಡ್ ಆಗಿದ್ದಾರೆ.


    ಮೊನ್ನೆ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ಘಟನೆಯ ಕುರಿತು ವರದಿ ಮಾಡುವ ಸಂದರ್ಭದಲ್ಲಿ. ರೈತರು ನಡೆಸಿದ್ದ ಟ್ರ್ಯಾಕ್ಟರ್​ ರ್ಯಾಲಿಯ ಸಂದರ್ಭದಲ್ಲಿ ಓರ್ವ ಯುವ ರೈತ ಟ್ರ್ಯಾಕ್ಟರ್​ ಚಲಾಯಿಸುವಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದ. ನಂತರದಲ್ಲಿ ಇದರ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿದೆ.


    ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡ ಸರ್ದೇಸಾಯಿಯವರು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ, ಗುಂಡು ತಗುಲಿ ಓರ್ವ ರೈತ ಮೃತಪಟ್ಟ ಎಂದು ಬ್ರೇಕಿಂಗ್​ ಕೊಟ್ಟರು. ಇವರು ಅತ್ಯಂತ ಹಿರಿಯ ಪತ್ರಕರ್ತರೂ ಆಗಿರುವ ಕಾರಣ, ಇದೇ ಸುದ್ದಿ ಬ್ರೇಕಿಂಗ್​ ರೂಪದಲ್ಲಿ ಟಿ.ವಿಯಲ್ಲಿ ಪ್ರಸಾರ ಕೂಡ ಆಯಿತು. ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿಯೂ ಪ್ರಕಟಿಸಿಕೊಂಡರು ಸರ್ದೇಸಾಯಿ.

    ಆದರೆ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ ರೈತ ಮೃತಪಟ್ಟಿದ್ದು, ಅಪಘಾತದಲ್ಲಿಯೇ ವಿನಾ ಪೊಲೀಸರ ಗುಂಡೇಟಿನಿಂದಲೂ ಅಲ್ಲ, ಆ ಸಮಯದಲ್ಲಿ ಪೊಲೀಸರು ಗುಂಡೂ ಹಾರಿಸಿಲ್ಲ ಎನ್ನುವುದು ವಿಡಿಯೋಗಳಿಂದ ತಿಳಿದುಬಂತು. ಸತ್ಯಾಂಶ ಏನು ಎಂಬ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದರು. ನಂತರ ತಪ್ಪಿನ ಅರಿವಾಗಿ ಸರ್ದೇಸಾಯಿಯವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಂಡು ಸತ್ಯಾಂಶವನ್ನು ಹೇಳಿದರು. ಇಂಥದ್ದೊಂದು ದೊಡ್ಡ ಪ್ರಮಾದ ಮಾಡಿದ ಕಾರಣ, ಈಗ ಸಂಸ್ಥೆ ಸರ್ದೇಸಾಯಿಯವರ ತಿಂಗಳ ಸಂಬಳವನ್ನು ಕಟ್​ ಮಾಡಿದೆ, ಮಾತ್ರವಲ್ಲದೇ ಎರಡು ವಾರಗಳವರೆಗೆ ಅಮಾನತು ಮಾಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *